ಹಾಸನ: ಕಾಡಾನೆಗಳ (Wild Elephants) ಹಿಂಡು ಬೆಳಂಬೆಳಗ್ಗೆ ಬೇಲೂರು ತಾಲೂಕಿನ ಬಿಕ್ಕೋಡು (Bikkodu) ಗ್ರಾಮದ, ತಾವರೆಕೆರೆಯಲ್ಲಿ ಪ್ರತ್ಯಕ್ಷವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಜಲಕ್ರೀಡೆಯಾಡಿವೆ.
ಮರಿಗಳು ಸೇರಿ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಜಲಕ್ರೀಡೆ ಆಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕೆರೆಯಲ್ಲಿ ಈಜಾಡಿ ಬಳಿಕ ಕಾಫಿ ತೋಟದೊಳಗೆ ತೆರಳಿವೆ. ಇದನ್ನೂ ಓದಿ: ಬಹ್ರೈಚ್‌ನ ಭಯಾನಕ ನರಭಕ್ಷಕ – ತೋಳಗಳ ದಾಳಿ ಹಿಂದಿದೆ ಸೇಡಿನ ಕಥೆ; ದಾಳಿ ಹೆಚ್ಚಲು ಕಾರಣ ಏನು ಗೊತ್ತೇ?
ಕಳೆದ ಮೂರ್ನಾಲ್ಕು ದಿನಗಳಿಂದ ಬಿಕ್ಕೋಡು ಗ್ರಾಮದ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿದ್ದು ಕಾಫಿ, ಬಾಳೆ, ಭತ್ತ, ಶುಂಠಿ ಬೆಳೆಗಳನ್ನು ನಾಶ ಮಾಡಿವೆ.
ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ (Forest Department) ಇಟಿಎಫ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾ ಮೃತಪಟ್ಟಿದ್ದು ಹೇಗೆ? ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಕಾಡಾನೆಗಳ ಭಯದಿಂದ ಕಾಫಿ ತೋಟಕ್ಕೆ ತೆರಳಲು ಕಾರ್ಮಿಕರು ಹಾಗೂ ಮಾಲೀಕರು ಹಿಂದೇಟು ಹಾಕುತ್ತಿದ್ದು ಸ್ಥಳದಲ್ಲೇ ಇಟಿಎಫ್ ಸಿಬ್ಬಂದಿ ಮೊಕ್ಕಾಂ ಹೂಡಿ ಗಜಪಡೆಯ ಚಲನವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ.
ಸದ್ಯ ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.