ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿಗೆ (Renukaswamy Murder Case) ಕಾರಣವಾದ ಅಸಲಿ ಅಂಶ ಯಾವುದು? ಮಾರಾಕಾಸ್ತ್ರಗಳಿಂದ ಹೊಡೆದಿದ್ದಕ್ಕೆ ಸಾವು ಸಂಭವಿಸಿತಾ? ಇಂತಹ ಹಲವು ಪ್ರಶ್ನೆಗಳಿಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ (Post Mortem Report) ಉತ್ತರ ಸಿಕ್ಕಿದೆ. ಇದನ್ನೂ ಓದಿ: ದರ್ಶನ್ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ? – ಎಳೆಎಳೆಯಾಗಿ ಬಿಚ್ಚಿಟ್ಟ ಪವಿತ್ರಾಗೌಡ
Advertisement
ರೇಣುಕಾ ಸಾವಿಗೆ ಕಾರಣವೇನು?
ತೀವ್ರ ಆಘಾತ ಹಾಗೂ ಅತಿಯಾದ ರಕ್ತಸ್ರಾವದಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ತಲೆ ಸೇರಿ ದೇಹದ ಹಲವೆಡೆ ಆಳವಾದ, ಸೀಳಿದ ಗಾಯವಾಗಿದೆ. ಇದನ್ನೂ ಓದಿ: ರಾಗಿಣಿ, ಶುಭಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್: ‘ಚಾರ್ಜ್‌ಶೀಟ್’ನಲ್ಲಿ ಬಯಲು
Advertisement
ದೇಹದೆಲ್ಲೆಡೆ ಮೂಗೇಟು, ಜಜ್ಜಿದ ಹಾಗೂ ತರಚಲಾಗಿದ್ದು ತಲೆ, ಕುತ್ತಿಗೆ, ಕಿವಿ, ಕಣ್ಣಿನ ಭಾಗ, ಕೆನ್ನೆಯ ಬಲಭಾಗದಲ್ಲಿ ಗಾಯವಾಗಿದೆ.
Advertisement
ಎದೆ, 2 ಭುಜ, ಬೆನ್ನು, ಹೊಟ್ಟೆ, ವೃಷಣ ಭಾಗಕ್ಕೆ ಹೊಡೆಯಲಾಗಿದೆ. ಎಡಗೈ, ಎಡ ಭುಜ, ಮುಂಗೈ, ಕಾಲು, ಎದೆ ಮೇಲೆ ಸುಟ್ಟ ಗಾಯ ಕಂಡು ಬಂದಿದೆ. ತೊಡೆ, ಮೊಣಕಾಲು, ಹಿಮ್ಮಡಿ, ಕೈ ಬೆರಳು, ಕಾಲ್ಬೆರಳು ಮತ್ತು ಮೂಗಿಗೂ ಏಟು ಬಿದ್ದಿದೆ.
Advertisement