ಶಿಮ್ಲಾ: ಭಾರೀ ಮಳೆಯಿಂದಾಗಿ ಮೂರಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದು, 20 ಜನರಿಗೆ ತೀವ್ರ ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ನಡೆದಿದೆ.
ಸೈನಿಕರು ಸೇರಿದಂತೆ ಒಟ್ಟು 30 ಜನ ಕಟ್ಟಡದಲ್ಲಿದ್ದರು, ಈಗ 18 ಜನರನ್ನು ರಕ್ಷಿಸಲಾಗಿದ್ದು, ಸೈನಿಕರೂ ಸೇರಿ ಇನ್ನು ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ. ಅವಶೇಷಗಳಡಿ ಸಿಲುಕಿದವರನ್ನು ಹೊರಗೆ ತರಲು ಕಾರ್ಯಾಚರಣೆ ನಡೆಯುತ್ತಿದೆ.
Advertisement
#BuildingCollapsed at Solan two team of #NDRF deployed for rescue operation. pic.twitter.com/F8zVDZXEIW
— NDRF ???????? (@NDRFHQ) July 14, 2019
Advertisement
ರಾಜಧಾನಿ ಶಿಮ್ಲಾದಿಂದ ಸುಮಾರು 55 ಕಿ.ಮೀ.ದೂರದಲ್ಲಿರುವ ಕುಮಾರ್‍ಕಟ್ಟಿ-ನಹಾನ್ ರಸ್ತೆಯಲ್ಲಿರುವ ಕಟ್ಟಡ ಸಂಜೆ 4ರ ವೇಳೆಗೆ ಕುಸಿದಿದೆ.
Advertisement
ಈ ಕುರಿತು ಸೋಲನ್‍ನ ಎಎಸ್‍ಪಿ ಶಿವ ಕುಮಾರ್ ಅವರು ಘಟನೆ ಕುರಿತು ಮಾಹಿತಿ ನೀಡಿ, ಪೊಲೀಸ್, ಗೃಹ ರಕ್ಷಕ ದಳ ಹಾಗೂ ಸೈನಿಕರು ರಕ್ಷಣಾ ಕಾರ್ಯ ನಡೆಸುತ್ತಿದ್ದು, ದಾಗ್‍ಶಾಯ್‍ನ ಸೈನಿಕರ ತಂಡ ಸಹ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಅವೇಶಷಗಳಡಿ ಸಿಲುಕಿದವರನ್ನು ರಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement
ಗಾಯಗೊಂಡವರನ್ನು ಧರಂಪೂರ್‍ನ ಆಸ್ಪತ್ರೆಗಳಿಗೆ ಹಾಗೂ ಸೋಲನ್‍ನ ಎಂಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಪರೀತ ಮಳೆಯಾಗುತ್ತಿರುವುದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಕಟ್ಟಡದ ಮೇಲ್ಭಾಗದಲ್ಲಿ ರೆಸ್ಟೋರೆಂಟ್ ಇದ್ದು, ಪ್ರವಾಸಿಗರು ಹಾಗೂ ಸೈನಿಕರು ಮಧ್ಯಾಹ್ನ ಊಟ ಮಾಡುತ್ತಿದ್ದ ವೇಳೆ ಕಟ್ಟಡ ಕುಸಿದಿದೆ. ನೆಲ ಹಾಗೂ ಮೊದಲ ಮಹಡಿಯಲ್ಲಿ ವಸತಿ ಗೃಹಗಳಿವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.