ಚಿತ್ರದುರ್ಗ: ದೇವರ ಹರಕೆ ಎಂಬ ನಂಬಿಕೆಯಿಂದ 20 ಅಡಿ ತಲೆ ಕೂದಲು ಬಿಟ್ಟಿದ್ದ 103 ವರ್ಷದ ಶತಾಯುಷಿ ಪಾಲಯ್ಯ ವಿಧಿವಶರಾಗಿದ್ದಾರೆ.
Advertisement
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಹಳ್ಳಿಯವರಾದ ಪಾಲಯ್ಯ ವಯೋ ಸಹಜ ಸಾವು ಕಂಡಿದ್ದಾರೆ. ಜೀವನ ಪೂರ್ತಿ ಐದಾರು ಕೆ.ಜಿ. ತೂಕದ ಭಾರದ ಕೂದಲನ್ನು ಹೊತ್ತು ಬದುಕುತ್ತಿದ್ದರು. ತಮ್ಮ ಉದ್ದವಾದ ಜನಡೆಯಿಂದಲೇ ಪಾಲಯ್ಯ ಅವರು ಪ್ರಸಿದ್ಧಿ ಪಡೆದಿದ್ದರು. ಅಂತ್ಯಕ್ರಿಯೆ ವೇಳೆ 20 ಅಡಿಯ ಜಡೆಯನ್ನು ಸಮಾಧಿಯಲ್ಲಿ ಹಾಸಿ ಅದರ ಮೇಲೆ ಮೃತದೇಹ ಮಲಗಿಸಿ ಅಂತ್ಯಕ್ರಿಯೆ ನಡೆಸಲಾಯಿತು.
Advertisement
ಪಾಲಯ್ಯ ಹುಟ್ಟಿದಾಗಿನಿಂದಲೂ ತಮ್ಮ ತಲೆ ಕೂದಲಿಗೆ ಕತ್ತರಿ ಹಾಕಿಸದೆ ತಮ್ಮ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಗೆ ಎತ್ತುಗಳನ್ನು ಭಕ್ತಿಯಿಂದ ಸಮರ್ಪಿಸುತ್ತಾ ಕೊನೆವರೆಗೂ ಗೋವು ಪಾಲಕರಾಗಿಯೇ ಜೀವನ ಸಾಗಿಸುತ್ತಾ ಕೊನೆಯುಸಿರೆಳೆದಿದ್ದಾರೆ.
Advertisement
Advertisement
ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲ ರಾಜ್ಯ ಹಾಗೂ ಆಂಧ್ರಪ್ರದೇಶದಲ್ಲೂ ತಮ್ಮ ಉದ್ದದ ಜಡೆಯಿಂದಲೇ ಇವರು ಖ್ಯಾತಿ ಪಡೆದಿದ್ದರು. ಪಾಲಯ್ಯ ಸಾವಿನಿಂದಾಗಿ ಜಡೆ ಸಂಪ್ರದಾಯದ ಒಂದು ಕೊಂಡಿ ಕಳಚಿದಂತಾಗಿದೆ.