ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಂಚಾಯತ್ (Trinamool Congress panchayat) ನಾಯಕನ ನಿರ್ಮಾಣ ಹಂತದ ಕಟ್ಟಡದಲ್ಲಿ ಕಚ್ಚಾ ಬಾಂಬ್ (Crude Bomb) ಸ್ಫೋಟಗೊಂಡು, ಇಬ್ಬರು ಕಟ್ಟಡ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಂಗಾಳದ (Bengal) ದೇಗಂಗಾದಲ್ಲಿ (Deganga) ನಡೆದಿದೆ.
Advertisement
ಟಿಎಂಸಿ ನಾಯಕ ಶಾಹಿ ಸುಲ್ತಾನ್ (TMC leader Shahi Sultana) ಅವರ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕೆಲವು ಕಾರ್ಮಿಕರು ಹೋಗಿದ್ದರು. ಈ ವೇಳೆ ಮೆಟ್ಟಿಲುಗಳ ಕೆಳಗೆ ಇಟ್ಟಿದ್ದ ಬಾಂಬ್‍ಗಳು ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಇದೀಗ ಗಾಯಾಳುಗಳನ್ನು ಬಿಸ್ವನಾಥಪುರ ಪ್ರಾಥಮಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು, ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ
Advertisement
Advertisement
ಘಟನಾ ಸ್ಥಳದಿಂದ ಪೊಲೀಸರು ಮೂರು ಹೆಚ್ಚುವರಿ ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದರೂ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಕಳೆದ ಮಂಗಳವಾರ ಉತ್ತರ 24 ಪರಗಣದ ಟಿಎಂಸಿ ಪಂಚಾಯತ್ ನಾಯಕ ಸುಕುರ್ ಅಲಿ ಅವರನ್ನು ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರು ಬಂಧಿಸಿದ್ದರು. ಮುಂದಿನ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಗೂ ಮುನ್ನವೇ ಬಂಗಾಳದ ಕೆಲವು ಭಾಗಗಳಲ್ಲಿ ಈ ರೀತಿಯ ಬೆಳವಣಿಗೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಪತಿಯ ಕಿರುಕುಳ – ಪ್ರೀತಿಸಿ ಮದುವೆಯಾಗಿದ್ದ ತುಂಬು ಗರ್ಭಿಣಿ ನೇಣಿಗೆ ಶರಣು