ಮೈಸೂರು: ಮಹಿಳೆಯರೇ ಎಚ್ಚರವಾಗಿರಿ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಸ್ ನಲ್ಲಿ ತೆರಳುವ ಮಹಿಳೆಯರೇ ನಿಮ್ಮ ಹಿಂದೆ ಮುಂದೆ ಯಾರಿದ್ದಾರೆ ಅನ್ನೋದು ಗಮನಿಸಿ. ಏಕೆಂದರೆ ಆಂಧ್ರ ಮೂಲದ ಕಳ್ಳಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೌದು. ಆಂಧ್ರ ಮೂಲದ ಇಬ್ಬರು ಕಳ್ಳಿಯರ ಕಳ್ಳತನದ ಪ್ಲಾನ್ ಬಸ್ ನಿರ್ವಾಹಕನ ಚಾಣಾಕ್ಷತನದಿಂದ ವಿಫಲಗೊಂಡಿರೋ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ನಗರದ ಹಳ್ಳಿಕೇರಿ ಹುಂಡಿಯ ಧರ್ಮಸ್ಥಳ ಮಂಜುನಾಥ ಸ್ವಸಹಾಯ ಸಂಘದ ಸದಸ್ಯೆ ಮೈಸೂರಿನಲ್ಲಿನ ಬ್ಯಾಂಕಿನಿಂದ 2 ಲಕ್ಷ ರೂ. ಡ್ರಾ ಮಾಡಿಕೊಂಡು ಬಸ್ ನಲ್ಲಿ ತೆರಳುತ್ತಿದ್ದರು.
Advertisement
ಈ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಆಂಧ್ರ ಮೂಲದ ಮಹಿಳೆಯರು ಬ್ಯಾಗ್ ನಿಂದ ಒಂದು ಲಕ್ಷ ರೂ. ಕದ್ದು, ಉಳಿದ ಹಣ ಕದಿಯೋಕೆ ಬಸ್ ನಲ್ಲಿ ಕೂತಿದ್ದರು. ಈ ಮಹಿಳೆಯರ ವರ್ತನೆಯಿಂದ ಅನುಮಾನಗೊಂಡ ಖಾಸಗಿ ಬಸ್ ಕಂಡಕ್ಟರ್ ಮೆಲ್ಲಹಳ್ಳಿಯಲ್ಲಿ ಬಸ್ ನಿಲ್ಲಿಸಿ ಮಹಿಳೆಯರ ವಿಚಾರಣೆ ನಡೆಸಿದ್ದಾರೆ.
Advertisement
ಆಗ ಇವರು ಹೀಗಾಗಲೇ ಬ್ಯಾಂಕ್ ನಿಂದ ಹಣ ತಂದ ಮಹಿಳೆಯ ಬ್ಯಾಗ್ ನಿಂದ ಒಂದು ಲಕ್ಷ ರೂ. ಲಪಟಾಯಿಸಿರೋದು ಗೊತ್ತಾಯಿತು. ಆಗ ಮೆಲ್ಲಹಳ್ಳಿ ಗ್ರಾಮಸ್ಥರು ಈ ಕಳ್ಳಿಯರ ಕೈ ಕಟ್ಟಿ ಧರ್ಮದೇಟು ನೀಡಿ ಮೈಸೂರು ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.