ಮಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮಂಗಳೂರಿನಲ್ಲಿ ನಡೆಸುವ ರೋಡ್ ಶೋ ವೇಳೆ ಪುಪ್ಪವೃಷ್ಟಿಗೆ ಭರ್ಜರಿ ತಯಾರಿ ನಡೆದಿದೆ. ಮಂಗಳೂರಿನ ಮೋದಿ ಅಭಿಮಾನಿಗಳು ಕೋಲಾರದಿಂದ (Kolar) ಎರಡು ಟನ್ ಚೆಂಡು ಹೂವುಗಳನ್ನ ತರಿಸಿಕೊಂಡಿದ್ದಾರೆ.
Advertisement
ಸದ್ಯ ನಗರದ ಸಂಘನಿಕೇತನ ಕಾರ್ಯಾಲಯದಲ್ಲಿ ಹೂವುಗಳ ದಳ ಬಿಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಹಿಳಾ ಕಾರ್ಯಕರ್ತರು ಶನಿವಾರ ರಾತ್ರಿಯಿಂದಲೇ ಹೂವಿನ ದಳ ಬಿಡಿಸೋ ಕೆಲಸ ಆರಂಭಿಸಿದ್ದು ಸಂಜೆ ರೋಡ್ ಶೋ (Modi Road Show in Mangaluru) ವೇಳೆ ನೆರೆದ ಮೋದಿ ಅಭಿಮಾನಿಗಳಿಗೆ ಇದನ್ನ ಕೊಡಲಿದ್ದಾರೆ. ರೋಡ್ ಶೋದಲ್ಲಿ ಸಾಗಿ ಬರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಹೂವಿನ ಮಳೆಗೈಯುವ ತಯಾರಿ ನಡೆಸಲಾಗಿದೆ. ಇದನ್ನೂ ಓದಿ: ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?
Advertisement
Advertisement
ಪೊಲೀಸ್ ಇಲಾಖೆ ಹೈ ಅಲರ್ಟ್: ಮಂಗಳೂರಿನಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ಆಗಮನ ಹಿನ್ನೆಲೆ ಮಂಗಳೂರು ಪೊಲೀಸ್ ಇಲಾಖೆ ಹೈ ಅಲರ್ಟ್ ಗೋಷಿಸಲಾಗಿದೆ ಎಂದು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
Advertisement
ಏರ್ ಪೋರ್ಟ್ ನಿಂದ ರೋಡ್ ಶೋ ಮುಕ್ತಾಯವಾಗುವ ಪ್ರದೇಶದವರೆಗೂ ಬಿಗಿ ಭದ್ರತೆ ಒದಗಿಸಲಾಗುತ್ತದೆ. ವಿಮಾನ ನಿಲ್ದಾಣದಿಂದ ಲೇಡಿಹಿಲ್ ವರೆಗೂ ವಿಶೇಷ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 2,500 ಸಾವಿರ ಪೊಲೀಸ್ ಸಿಬ್ಬಂದಿ, 10 ಜನ ಎಸ್ಪಿ ಹಾಗೂ ಹೆಚ್ಚುವರಿ ಎಸ್ಪಿ ರಾಂಕ್ ಅಧಿಕಾರಿಗಳು, 250 ಡಿವೈಎಸ್ ಪಿ ಮತ್ತು ಪಿಎಸ್ ಐ ಯಾರ್ಂಕ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.
ವಾಹನ ಸಂಚಾರ, ಪಾಕಿರ್ಂಗ್ ಸೇರಿದಂತೆ ಸಂಚಾರ ವ್ಯವಸ್ಥೆಗೆ ಬದಲಾವಣೆ ಮಾಡಲಾಗಿದೆ. ರೋಡ್ ಶೋ ಆರಂಭವಾಗುವ 2 ಗಂಟೆ ಮುನ್ನ ನಿಬಂಧನೆಗಳು ಜಾರಿಗೊಳಿಸಲಾಗುತ್ತದೆ. ರೋಡ್ ಶೋ ಸುತ್ತಮುತ್ತದ ಪ್ರದೇಶದಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗುತ್ತದೆ. 3 ದಿನದಿಂದ ಭದ್ರತೆಯ ದೃಷ್ಟಿಕೋನದಲ್ಲಿ ನಿರಂತರ ಡ್ರೋನ್ ಸರ್ವೇ ನಡೆಸಿದ್ದೇವೆ ಎಂದು ಅಗರ್ವಾಲ್ ತಿಳಿಸಿದ್ದಾರೆ.