ಕೋಲಾರ: ಚಿಕ್ಕಬಳ್ಳಾಪುರ ಮೂಲದ ರೈತರೊಬ್ಬರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಕೋರಿ ಜಿಲ್ಲೆಯ ಮುಳಬಾಗಿಲು ತಾಲೂಕಿನ ಇತಿಹಾಸ ಪ್ರಸಿದ್ಧ ಕುರುಡುಮಲೆ ವಿನಾಯಕನಿಗೆ ದ್ರಾಕ್ಷಾ ಫಲ ಅಲಂಕಾರ ಮಾಡಿಸಿದ್ದಾರೆ.
ತಾವು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವಂತೆ ಬೇಡಿಕೊಂಡಿದ್ದು, ವಿನಾಯಕನ ಈ ವಿಶೇಷ ಅಲಂಕಾರಕ್ಕಾಗಿ 2 ಟನ್ ದ್ರಾಕ್ಷಿ ನೀಡಿದ್ದಾರೆ. ನೂರಾರು ಭಕ್ತರು ವಿಶೇಷ ಅಲಂಕಾರದ ಗಣೇಶನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬ ಸದಸ್ಯರಿಗೂ ಇನ್ಮುಂದೆ ಸರ್ಕಾರಿ ನೌಕರಿ
Advertisement
Advertisement
ಐತಿಹಾಸಿಕ ಹಿನ್ನೆಲೆಯಿರುವ ಈ ದೇವಾಲಯಕ್ಕೆ ಮಹಾಭಾರತದ ಕಾಲದಲ್ಲಿ ಶ್ರೀಕೃಷ್ಣ ಬಂದು ಪೂಜೆ ನೇರವೇರಿಸಿದ್ದರು ಎಂಬ ಪ್ರತೀತಿ ಇದೆ. ಅದಕ್ಕಾಗಿಯೇ ಹಿರಿಯ ರಾಜಕಾರಣಿಗಳು ಚುನಾವಣೆಗೂ ಮುನ್ನ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅದರಂತೆಯೇ ರೈತರು ತಾವು ಬೆಳೆದ ಬೆಳೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗಲಿ ಎಂದು ಹರಿಕೆ ಹೊತ್ತು ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಚೆಲುವ ಸ್ವಾಮಿ ತಿಳಿಸಿದ್ದಾರೆ.