ದಿಸ್ಪುರ್: ಬಾಂಗ್ಲಾದೇಶದ (Bangladesh) ಇಬ್ಬರು ಶಂಕಿತ ಭಯೋತ್ಪಾದಕರನ್ನು ಗುವಾಹಟಿಯಲ್ಲಿ (Guwahati) ಪೊಲೀಸರು ಬಂಧಿಸಿದ್ದಾರೆ. ಬಂಧಿತರು ನಿಷೇಧಿತ ಅಲ್ ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಶಂಕಿತರನ್ನು ಬಹರ್ ಮಿಯಾ (30) ಮತ್ತು ರಾಸೆಲ್ ಮಿಯಾ (40) ಎಂದು ಗುರುತಿಸಲಾಗಿದೆ. ಆರೋಪಿಗಳು ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ)ಗೆ ಸೇರಿದವರು. ಅವರು ಭಾರತದಲ್ಲಿ ನಿಷೇಧಿತ ಅಲ್ ಖೈದಾದೊಂದಿಗೆ (ಎಕ್ಯೂಐಎಸ್) ಸಂಪರ್ಕ ಹೊಂದಿದ್ದು, ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುವ ಸಲುವಾಗಿ ಬಾಂಗ್ಲಾ ದೇಶದಿಂದ ಗುವಾಹಟಿಗೆ ಬಂದು ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧರೆಗುರುಳಿದ ಬೃಹತ್ ಬಿಲ್ ಬೋರ್ಡ್- ಸಾವಿನ ಸಂಖ್ಯೆ 14ಕ್ಕೆ ಏರಿಕೆ
ಆರೋಪಿಗಳು ಪಾಸ್‍ಪೋರ್ಟ್ ಇಲ್ಲದೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದಾರೆ. ಅಲ್ಲದೇ ಅಸ್ಸಾಂನಲ್ಲಿ ಭಯೋತ್ಪಾದನಾ ಜಾಲವನ್ನು ಹರಡಲು ಭಾರತೀಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ನಕಲಿ ಎಂದು ಶಂಕಿಸಲಾದ ಆಧಾರ್ ಮತ್ತು ಪಾನ್ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಷ್ಣೋಯ್, ಗೋದಾರಾ ಗ್ಯಾಂಗ್‍ನ ಐವರು ಶೂಟರ್‌ಗಳ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ