ಲಕ್ನೋ: ಒಂದೇ ದಿನದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಇಬ್ಬರು ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಈ ಎರಡು ಘಟನೆಗಳು ಶುಕ್ರವಾರ ಉತ್ತರ ಪ್ರೆದೇಶದಲ್ಲಿ ನಡೆದಿದ್ದು. ಕೊಲೆಯಾದ ಕಾರ್ಯಕರ್ತರನ್ನು ಲಾಲ್ಜಿ ಯಾದವ್ ಮತ್ತು ರಾಮ್‍ತೆಕ್ ಕಟಾರಿಯಾ ಎಂದು ಗುರುತಿಸಲಾಗಿದೆ. ಎರಡು ಕೊಲೆಗಳು ರಾಜಕೀಯ ವೈಷಮ್ಯದಿಂದ ಆಗಿದೆ ಎಂದು ಹೇಳಲಾಗಿದೆ.
Advertisement
ಬೆಳಗ್ಗೆ 9.30 ರ ಸಮಯದಲ್ಲಿ ಲಾಜ್ಜಿ ಯಾದವ್ ಅವರು ತಮ್ಮ ಕಾರಿನಲ್ಲಿ ಜೌನಪುರ ಜಿಲ್ಲೆಯ ಖ್ವಾಜಾ ಸಾರೈ ಪ್ರದೇಶದಲ್ಲಿ ಬರುತ್ತಿದ್ದರು. ಈ ವೇಳೆ ಮೂರು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರನ್ನು ಅಡ್ಡಗಟ್ಟಿ ಗುಂಡಿನ ದಾಳಿ ಮಾಡಿದ್ದಾರೆ.
Advertisement
समाजवादी पार्टी के राष्ट्रीय अध्यक्ष श्री अखिलेश यादव ने कहा है कि उत्तर प्रदेश में भाजपा सरकार अपराधों पर रोक लगाने में पूरी तरह निष्फल रही है। https://t.co/ozc7d4wHZe
— Samajwadi Party (@samajwadiparty) May 31, 2019
Advertisement
ಹಲವು ಕ್ರಿಮಿನಲ್ ಕೇಸ್ ಗಳನ್ನು ಎದುರಿಸುತ್ತಿದ್ದ ಯಾದವ್ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಇದೇ ದಿನ ಮಧ್ಯಾಹ್ನ 12.30ಕ್ಕೆ ಗೌತಮ್ ಬುದ್ಧನಗರ್ ಜಿಲ್ಲೆಯ ಸಮಾಜವಾದಿ ಪಕ್ಷದ ದಾದ್ರಿ ಅಸೆಂಬ್ಲಿ ವಿಭಾಗದ ಅಧ್ಯಕ್ಷರಾಗಿದ್ದ ರಾಮ್‍ತೆಕ್ ಕಟಾರಿಯಾ ಅವರನ್ನು ಕೂಡ ಇದೇ ರೀತಿ ಕೊಲೆ ಮಾಡಲಾಗಿದೆ.
लोकसभा चुनावों के बाद उत्तर प्रदेश में शुरू हुई राजनीतिक हत्याओं का नहीं थमना दर्शाता है कि ये सत्ता द्वारा प्रायोजित है।ग़ाज़ीपुर, जौनपुर के बाद दादरी में समाजवादी पार्टी के नेता की हत्या ध्वस्त क़ानून व्यवस्था की तस्वीर। यूपी में व्याप्त जंगलराज!
— Samajwadi Party (@samajwadiparty) May 31, 2019
ಕಟಾರಿಯಾ ಅವರು ಜಾರ್ಖಾ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಹತ್ತಿವಿದ್ದ ಸಮಯದಲ್ಲಿ ಬುಲೆಟ್ ಬೈಕಿನಲ್ಲಿ ಮುಖವಾಡ ಧರಿಸಿ ಬಂದ ನಾಲ್ಕು ಜನ ದುಷ್ಕರ್ಮಿಗಳು 10 ಸುತ್ತು ಗುಂಡಿನ ದಾಳಿ ಮಾಡಿದ್ದಾರೆ. ಗುಂಡು ತಲೆಗೆ ಬಿದ್ದ ಕಾರಣ ಕಟಾರಿಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಟಾರಿಯಾ ಅವರ ಸಹೋದರ ಕೃಷ್ಣ, ವೈಯಕ್ತಿಕ ವೈರತ್ವದಿಂದ ಈ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.