ಇಸ್ಲಾಮಾಬಾದ್: ತಮ್ಮ ವಿದೇಶಿ ಮಹಿಳಾ ಸಹಪಾಠಿಗಳಿಗೆ ಸ್ಥಳೀಯ ಗೂಂಡಾಗಳು ಕಿರುಕುಳ ನೀಡುವುದನ್ನು ವಿರೋಧಿಸಿದ್ದಕ್ಕೆ ಪ್ಯಾಲೆಸ್ತೀನ್‌ನ (Palestinian students) ಇಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಲಾಹೋರ್‌ನಿಂದ 80 ಕಿಮೀ ದೂರದಲ್ಲಿರುವ ಗುಜ್ರಾನ್‌ವಾಲಾ ನಗರದಲ್ಲಿ ಈ ಘಟನೆ ನಡೆದಿದೆ. ಗುಜ್ರಾನ್‌ವಾಲಾ ವೈದ್ಯಕೀಯ ಕಾಲೇಜಿನ ಅಬ್ದುಲ್ ಕರೀಮ್ ಮತ್ತು ಖಲ್ದೂನ್ ಅಲ್ಶೇಖ್ ಹಲ್ಲೆಗೊಳಗಾದ ಸಂತ್ರಸ್ತರು. ಇದನ್ನೂ ಓದಿ: 199 ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿಟ್ಟುಕೊಂಡ ಹಮಾಸ್
Advertisement
Advertisement
ತಮ್ಮ ಅಪಾರ್ಟ್‌ಮೆಂಟ್‌ನಿಂದ ಹೊರಬರುತ್ತಿದ್ದ ಅಬ್ದುಲ್ ಮತ್ತು ಖಾಲ್ದೂನ್ ಮೇಲೆ ಏಳು ಜನರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಕೋರರು ವಿದೇಶಿ ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದರು. ಅದನ್ನು ಪ್ಯಾಲೆಸ್ತೀನ್‌ನ ವಿದ್ಯಾರ್ಥಿಗಳು ವಿರೋಧಿಸಿದ್ದರು. ಇದರಿಂದ ಕೋಪಗೊಂಡ ದಾಳಿಕೋರರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಗಾಯಗೊಂಡ ಪ್ಯಾಲೆಸ್ತೀನ್ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಶಂಕಿತರ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಯಾರ ಬಂಧನವೂ ಆಗಿಲ್ಲ. ಇದನ್ನೂ ಓದಿ: 10ನೇ ದಿನಕ್ಕೆ ಕಾಲಿಟ್ಟ ವಾರ್- ಇಸ್ರೇಲ್ ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು
Advertisement
ಪ್ಯಾಲೆಸ್ತೀನಿಯನ್ ವಿದ್ಯಾರ್ಥಿಗಳ ಮೇಲಿನ ದಾಳಿಗೂ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೂ ಸಂಬಂಧ ಇರುವ ಸಾಧ್ಯತೆ ವಿಚಾರವನ್ನು ಪೊಲೀಸರು ತಳ್ಳಿಹಾಕಿದ್ದಾರೆ.
Web Stories