ಭುವನೇಶ್ವರ: ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆಯುತ್ತಿದ್ದ ಹತ್ತನೇ ತರಗತಿ ಪರೀಕ್ಷೆ ವೇಳೆ ಕೊಠಡಿಯಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದ ಇಬ್ಬರು ಇನ್‌ವಿಜಿಲೇಟರ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಎರಡು ವಿಭಿನ್ನ ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಶಿಕ್ಷಕರು ಮೊಬೈಲ್ ಬಳಸುತ್ತಿರುವುದನ್ನು ತಪಾಸಣೆ ವೇಳೆ ಗಮನಿಸಿದ ಜಿಲ್ಲಾ ಶಿಕ್ಷಣಾಧಿಕಾರಿ ರಂಜನ್ ಗಿರಿ ತಕ್ಷಣ ಇಬ್ಬರನ್ನು ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು: ಡಾ.ವಿಶಾಲ್ ರಾವ್
Advertisement
Advertisement
ಎರಡು ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ಮತ್ತು ಉಪ ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಕೇಂದ್ರದ ಅಧೀಕ್ಷಕರನ್ನು ಹೊರತುಪಡಿಸಿ ಯಾರೂ ಸೆಲ್ ಫೋನ್‍ಗಳನ್ನು ಪರೀಕ್ಷಾ ಹಾಲ್‍ಗೆ ಒಯ್ಯುವಂತಿಲ್ಲ ಎಂದು ಸೂಚಿಸಿದ್ದಾರೆ.
Advertisement
ಪ್ರೌಢ ಶಿಕ್ಷಣ ಮಂಡಳಿಯು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸುತ್ತಿದ್ದು, ಪರೀಕ್ಷೆಗಳು ಬುಧವಾರ ಆರಂಭಗೊಂಡಿವೆ. ಇದನ್ನೂ ಓದಿ: ಭೂಮಿಯ ಸಮೀಪದಿಂದ ಹಾದುಹೋಗಲಿದೆ ಪರಮಾಣು ಬಾಂಬ್‌ಗಿಂತ 30 ಪಟ್ಟು ಹೆಚ್ಚು ಶಕ್ತಿಯ ಕ್ಷುದ್ರಗ್ರಹ
Advertisement
Teachers, Mobile, Examination Room, Bhuvaneswar