ಛತ್ತೀಸ್‍ಗಢ: ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಣ ಮಾಡಿ ಸತತ 14 ದಿನಗಳ ಕಾಲ ಅತ್ಯಾಚಾರ ನಡೆಸಿದ ಘಟನೆ ಛತ್ತೀಸ್‍ಗಢ ರಾಜ್ಯದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.
17 ಮತ್ತು 15 ವರ್ಷದ ವಯಸ್ಸಿನ ಇಬ್ಬರು ಬಾಲಕಿಯರನ್ನು ಸೋಮವಾರ ಪೊಲೀಸರು ಮಧ್ಯ ಪ್ರದೇಶ ಬಿಜುರಿ ರೈಲ್ವೇ ನಿಲ್ದಾಣದ ಸಮೀಪ ರಕ್ಷಣೆ ಮಾಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ನಡೆದಿದ್ದೇನು?
ಸಂತ್ರಸ್ತೆ ಬಾಲಕಿಯರು ಛತ್ತೀಸ್‍ಗಢ ಮತ್ತು ಮಧ್ಯ ಪ್ರದೇಶದ ಗಡಿಯಲ್ಲಿರುವ ಕೊರಿಯಾದ ಝಾಗ್ರಾಖಂಡ್ ಪ್ರದೇಶಕ್ಕೆ ಸೇರಿದ್ದಾರೆ. ಮಾರ್ಚ್ 4 ರಂದು ಪ್ರಕರಣದ ಪ್ರಮುಖ ಆರೋಪಿ ಅಭಿಜಿತ್ ಪಾಲ್(20) ಯುವತಿಯನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಜೊತೆಗೆ ಆಕೆಯ ಗೆಳತಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಆತ ಇಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
Advertisement
ಆರೋಪಿ ತನ್ನ 8 ಸ್ನೇಹಿತರಿಗೂ ಈ ಕೃತ್ಯದ ಬಗ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಲೆಡ್ರಿ ಮತ್ತು ಬಿಜುರಿಯಲ್ಲಿ ಅವರಿಬ್ಬರನ್ನು ಇರಿಸಿ ಸತತ 14 ದಿನಗಳ ಕಾಲ ಆರೋಪಿಗಳು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ನಿವೇದಿತಾ ಶರ್ಮಾ ಅವರು ತಿಳಿಸಿದ್ದಾರೆ.
Advertisement
ಮಾರ್ಚ್ 18 ಕುಟುಂಬದವರು ಬಾಲಕಿಯರು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ನಂತರ ಪೊಲೀಸ್ ತಂಡ ಶೋಧ ಕಾರ್ಯ ಆರಂಭಿಸಿ ಬಿಜುರಿ ರೈಲ್ವೇ ನಿಲ್ದಾಣದ ಬಳಿ ದಾಳಿ ಮಾಡಿ ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
9 ಜನ ಆರೋಪಿಗಳಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ. ಅಶ್ರಫ್ ಅಲಿ(26), ಮನೋಜ್ ಕುಮಾರ್(28), ಹೇಮಾರಾಜ್ ಪನಿಕಾ(20), ಅವಿನಾಶ್ (28), ಜಿತೇಂದ್ರ ಕುಮಾರ್ ರೈ (26), ರಾಕೇಶ್ ಕುಮಾರ್ (23) ರನ್ನು ಬಂಧಿಸಲಾಗಿದ್ದು, ಮತ್ತಿಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಅಪಹರಣ, ಅತ್ಯಾಚಾರ, ಹಲ್ಲೆ ಸೇರಿದಂತೆ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್‍ಪಿ ತಿಳಿಸಿದ್ದಾರೆ.