ಕಾರವಾರ: ಮಳೆ ಬಂದರೆ ಸಾಕು ಸರಿಸೃಪಗಳು ಎಲ್ಲಿ ಬೇಕೆಂದರಲ್ಲಿ ಆಹಾರ ಅರಸಿ ಹೋಗುತ್ತವೆ. ಇದೀಗ ಆಹಾರ ಅರಸಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಅಲ್ಲಿದ್ದ ಜನರನ್ನು ಭಯಗೊಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ನಗರದಲ್ಲಿ ನಡೆದಿದೆ.
ಅಪರೂಪಕ್ಕೆ ಆಸ್ಪತ್ರೆಗೆ ಆಗಮಿಸಿದ್ದ ಕಾಳಿಂಗ ಸರ್ಪವನ್ನು ನೋಡಲು ಜನಜಂಗುಳಿ ಸೇರುತಿದ್ದಂತೆ ಹೆದರಿ ಆಸ್ಪತ್ರೆಯ ಎದುರಿಗಿರುವ ಮನೆಯ ಚರಂಡಿ ಸೇರಿತ್ತು. ಸುಮಾರು 8 ಅಡಿ ಉದ್ದವಿದ್ದ ಕಾಳಿಂಗ ಸರ್ಪವನ್ನು ಉಪ ವಲಯ ಅರಣ್ಯಾಧಿಕಾರಿ ಎ. ಪ್ರಸನ್ನ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Advertisement
Advertisement
ಇನ್ನೂ ಕಾರವಾರ ತಾಲೂಕಿನ ಹೋಟೆಗಾಳಿ ಗ್ರಾಮದ ಲಂಬೋದರ ತಳೆಕರ ಅವರ ಮನೆಯಲ್ಲಿ 9 ಅಡಿ ಉದ್ದದ ಕಾಳಿಂಗ ಸರ್ಪ ಮನೆಯ ಕಟ್ಟಿಗೆ ಸಂಗ್ರಹದಲ್ಲಿ ಕಾಣಿಸಿಕೊಂಡಿದೆ. ತಕ್ಷಣ ಲಂಬೋದರ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
Advertisement
ಮಾಹಿತಿ ತಿಳಿದು ಗೋಪಶಿಟ್ಟಾ ವಲಯದ ಅರಣ್ಯಾಧಿಕಾರಿ ಜಿ.ವಿ ನಾಯ್ಕ ಮಾರ್ಗದರ್ಶನದಲ್ಲಿ ಉರಗ ಪ್ರೇಮಿ ರಮೇಶ್ ಬಡಿಗೇರ, ಅರಣ್ಯ ರಕ್ಷಕರಾದ ಮಲ್ಲಪ್ಪ ಮಾಂಜರಿ, ಪ್ರಶಾಂತ್ ಜಿ. ಅವರು ಜೊತೆಗೂಡಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]