ಟೆಲ್ ಅವೀವ್: ಹಮಾಸ್ (Hamas) ಉಗ್ರರ ದಾಳಿಯಲ್ಲಿ ಭಾರತೀಯ (India) ಮೂಲದ ಕನಿಷ್ಠ ಇಬ್ಬರು ಇಸ್ರೇಲಿ (Israel) ಮಹಿಳಾ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅಶ್ಡೋಡ್‍ನ ಹೋಮ್ ಫ್ರಂಟ್ ಕಮಾಂಡ್‍ನಲ್ಲಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಓರ್ ಮೋಸೆಸ್ ಮತ್ತು ಪೊಲೀಸ್ ಸೆಂಟ್ರಲ್ ಡಿಸ್ಟ್ರಿಕ್ಟ್‍ನ ಬಾರ್ಡರ್ ಅಧಿಕಾರಿ ಕಿಮ್ ಡೋಕ್ರಾಕರ್ ಅವರು ಅಕ್ಟೋಬರ್ 7 ರಂದು ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಯುದ್ಧದಲ್ಲಿ ಕರ್ತವ್ಯದ ವೇಳೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಯುದ್ಧ ಪೀಡಿತ ಇಸ್ರೇಲ್‍ನಿಂದ 197 ಜನರನ್ನು ಹೊತ್ತು ದೆಹಲಿಯೆಡೆಗೆ ಹಾರಿದ 3ನೇ ವಿಮಾನ
Advertisement
Advertisement
ಇದುವರೆಗೆ 286 ಸೇನಾ ಯೋಧರು ಮತ್ತು 51 ಪೊಲೀಸ್ ಅಧಿಕಾರಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸತ್ತವರ, ಕಾಣೆಯಾದ ಹಾಗೂ ಅಪಹರಣಕ್ಕೊಳಗಾದವರ ಹುಡುಕಾಟವನ್ನು ಮುಂದುವರೆಸುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಭಾನುವಾರ ತಿಳಿಸಿದೆ. ಯುದ್ಧದಲ್ಲಿ 2,670 ಪ್ಯಾಲೇಸ್ಟಿನಿಯನ್ನರು ಸಾವಿಗೀಡಾಗಿದ್ದಾರೆ. 9,600 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಅಖಾಡಕ್ಕಿಳಿದ ಇಸ್ರೇಲ್ ಪ್ರಧಾನಿ – ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆ
Web Stories