ಬೆಂಗಳೂರು: ನಗರದಲ್ಲಿ ದಸರಾ (Dasara) ಮೆರವಣಿಗೆ ವೇಳೆ ಬಂದಿದ್ದ ಗ್ಯಾಂಗ್‍ಗಳಿಂದ ಗಲಾಟೆ (GangWar) ನಡೆದು, ಇಬ್ಬರು ಗಂಭೀರ ಗಾಯಗೊಂಡಿರುವ ಪ್ರತ್ಯೇಕ ಎರಡು ಘಟನೆ ವಿಜಯ ನಗರ, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಣ್ಣೆ, ಮಾರಕಾಸ್ತ್ರಗಳಿಂದ ಪ್ರತ್ಯೇಕ ಎರಡು ಗ್ಯಾಂಗ್ ಬಡಿದಾಡಿಕೊಂಡಿವೆ. ಪ್ರತ್ಯೇಕ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಪುಂಡರ ಗ್ಯಾಂಗ್ ಎಸ್ಕೇಪ್ ಆಗಿದೆ. ವಿಜಯನಗರದ ಚೇತನ್ ಶೆಟ್ಟಿ, ಹಾಗೂ ಚೇತನ್ ಸೋಮಶೇಖರ್ ಎಂಬುವರ ಮೇಲೆ ಬಾರ್‌ಗಳ (Bar) ಮುಂದೆ ದಾಳಿ ನಡೆದಿದ್ದು, ಮಾಗಡಿ ರೋಡ್ ಠಾಣಾ ವ್ಯಾಪ್ತಿಯ ನವ್ಯ ಬಾರ್ ಮುಂದೆ ಹಾಗೂ ವಿಜಯ ನಗರ ಠಾಣಾ ವ್ಯಾಪ್ತಿಯ ಎಂ.ಆರ್ ಗಾರ್ಡನ್ ಬಾರ್ & ರೆಸ್ಟೋರೆಂಟ್ ಬಳಿ ಗ್ಯಾಂಗ್‍ವಾರ್ ನಡೆದಿದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ
ಘಟನೆಯಲ್ಲಿ ಗಾಯಗೊಂಡಿರುವ ದೀಪು ಹಾಗೂ ಚೇತನ್ ಶೆಟ್ಟಿ, ಚೇತನ್ ಸೋಮಶೇಖರ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ರೋಡ್, ಹಾಗೂ ವಿಜಯ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದೆ. ಇದನ್ನೂ ಓದಿ: PFI ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಪತ್ತೆ!