ನವದೆಹಲಿ: ಚಿನ್ನ ಕಳ್ಳಸಾಗಣೆ (Gold Smuggling) ಮಾಡಲು ಸಹಕರಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್ (IndiGo Airlines) ಇಬ್ಬರು ಉದ್ಯೋಗಿಗಳನ್ನು ಕಸ್ಟಮ್ಸ್ ಅಧಿಕಾರಿಗಳು (Customs Officials) ಬಂಧಿಸಿದ್ದಾರೆ.
ಇಂಡಿಗೋ ಏರ್‌ಲೈನ್ಸ್‌ನ ಸಾಜಿದ್ ರೆಹಮಾನ್ ಮತ್ತು ಮೊಹಮ್ಮದ್ ಸಾಮಿಲ್‌ನನ್ನು ಅಂತಾರಾಷ್ಟ್ರೀಯ ವಿಮಾನ (International Airport) ನಿಲ್ದಾಣದಲ್ಲಿಂದು ಬಂಧಿಸಿದ್ದಾರೆ. ಇದನ್ನೂ ಓದಿ: ಮತ್ತೆ ಮುಖ್ಯಮಂತ್ರಿಯಾಗಿ – ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ 70ಕ್ಕೂ ಹೆಚ್ಚು ಅರ್ಚಕರು
Advertisement
Advertisement
ಈ ಇಬ್ಬರು ಅಧಿಕಾರಿಗಳು ಸುಮಾರು 4.9 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕರಿಗೆ ಸಹಕರಿಸಲು ಪ್ರಯತ್ನಿಸುತ್ತಿದ್ದರು. ತಪಾಸಣೆ ವೇಳೆ ವಿಮಾನ ನಿಲ್ದಾಣದಲ್ಲಿ ಲಗೇಜ್ ಬಿಟ್ಟು ಪರಾರಿಯಾದ ಪ್ರಯಾಣಿಕನ ಲಗೇಜ್‌ನಲ್ಲಿ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು 2.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಸಿದ್ಧಾರ್ಥ್ ಜೊತೆ ಡ್ಯುಯೆಟ್ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್
Advertisement
Advertisement
ಇತ್ತೀಚೆಗೆ ದೇಶದ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಣೆಯ ಪ್ರಕರಣಗಳು ವರದಿಯಾಗಿದ್ದು, ನಿರಂತರವಾಗಿ ಅವುಗಳನ್ನು ಭೇದಿಸುವಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದಾರೆ.