CrimeLatestMain PostNational

ಸಿಬಿಐ ಅಧಿಕಾರಿಗಳಂತೆ ನಟಿಸಿ ಹಣ ವಸೂಲಿಗೆ ಯತ್ನ – ಇಬ್ಬರು ಅರೆಸ್ಟ್

ದಿಸ್ಪುರ್: ಸಿಬಿಐ ಅಧಿಕಾರಿಗಳಂತೆ ನಟಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಅಸ್ಸಾಂ ಪೊಲೀಸರು ಶುಕ್ರವಾರ ಕರೀಂಗಂಜ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ದಿಲ್ವಾರ್ ಹುಸೇನ್ ಮತ್ತು ರಶೀದ್ ಅಹ್ಮದ್ ಎಂದು ಗುರುತಿಸಲಾಗಿದೆ. ಆಗಸ್ಟ್ 18 ರಂದು ಪಥರ್ಕಂಡಿ ಪ್ರದೇಶದ ಉದ್ಯಮಿಯೊಬ್ಬರು ಈ ಬಗ್ಗೆ ದೂರು ನೀಡಿರುವುದಾಗಿ ಕರೀಂಗಂಜ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಾರ್ಥ ಪ್ರತಿಮ್ ದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಬಳಿಕ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಪ್ಲಾನ್- ಆಗಸ್ಟ್ 26ರಂದು ನಡೆಯುತ್ತಾ ಹೈಡ್ರಾಮಾ..?

ಉದ್ಯಮಿಗೆ ಸುಲಿಗೆ ಕರೆ ಬಂದಿದ್ದು, ಸಿಬಿಐ ಅಧಿಕಾರಿಯಂತೆ ನಟಿಸುತ್ತಿದ್ದ ವ್ಯಕ್ತಿ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ತಕ್ಷಣ ನಾವು ಮೊಬೈಲ್ ಫೋನ್ ನಂಬರ್ ಅನ್ನು ಟ್ರ್ಯಾಕ್ ಮಾಡಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು. ನಂತರ ದಿಲ್ವಾರ್ ಹುಸೇನ್ ಮತ್ತು ರಶೀದ್ ಅಹ್ಮದ್‍ರನ್ನು ಬಂಧಿಸಿದ್ದೇವೆ.

YouTube video

ಈ ಕೃತ್ಯವೆಸಗಲು ರಶೀದ್ ಅಹ್ಮದ್, ದಿಲ್ವಾರ್ ಹುಸೇನ್‍ನ ಮೊಬೈಲ್ ಫೋನ್ ಬಳಸಿದ್ದಾನೆ. ಅಲ್ಲದೇ ಹಣಕ್ಕಾಗಿ ಸಿಬಿಐ ಅಧಿಕಾರಿಯಂತೆ ನಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಲದಲ್ಲೇ ತುಮಕೂರಲ್ಲಿ ಸಾವರ್ಕರ್ ಪಾರ್ಕ್- ಹಳೆ ಫೋಟೋ ವೈರಲ್, ಕೈ ಪಡೆಗೆ ಮುಜುಗರ

Live Tv

Leave a Reply

Your email address will not be published. Required fields are marked *

Back to top button