ಲಂಡನ್: ಮಿಲಿಟರಿ ತರಬೇತಿ (Military Training) ವೇಳೆ 75 ಕೋಟಿ ರೂ. ಮೌಲ್ಯದ ಚಾಪರ್‌ನಲ್ಲಿ ಸೆಕ್ಸ್ ಮಾಡುತ್ತಿದ್ದಾಗಲೇ ಸೈನಿಕರಿಬ್ಬರು ಸಿಕ್ಕಿಬಿದ್ದಿರುವ ಘಟನೆ ಬ್ರಿಟನ್‌ನಲ್ಲಿ (UK Soldier) ನಡೆದಿದೆ.
ಯುಕೆ ಮಿಲಿಟರಿ ತರಬೇತಿ ಪ್ರದೇಶದಲ್ಲಿ ಅಪಾಚೆ ಚಾಪರ್‌ನ (Apache helicopter) ರೋಟರ್‌ಗಳಲ್ಲಿ ಅಸಾಮಾನ್ಯ ಚಲನೆ ಕಂಡುಬಂದಿದೆ. ನಿರ್ವಹಣಾ ಸಿಬ್ಬಂದಿ ಇದನನು ಪರಿಶೀಲಿಸಿದಾಗ ಕುಡಿದು ಸೆಕ್ಸ್ ಮಾಡುತ್ತಿದ್ದ ಸೈನಿಕರು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ದೆಹಲಿಗೆ ಹೊರಟ ನಂದಿನಿ – ನ.21ರಿಂದ ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ಕೆಎಂಎಫ್ ಉತ್ಪನ್ನಗಳು
30 ಎಂಎಂ ಫಿರಂಗಿ ಮತ್ತು ಹೆಲ್ಫೈರ್ ಕ್ಷಿಪಣಿಗಳನ್ನು ಹೊಂದಿದ ಶಸ್ತ್ರಸಜ್ಜಿತ ಅಪಾಚೆ ಚಾಪರ್ ತರಬೇತಿ ಪೂರ್ಣಗೊಳಿಸಿತ್ತು. ಇದಾದ ಬಳಿಕವೂ ರೋಟರ್‌ಗಳು ಮೇಲಕ್ಕೆ ಮತ್ತು ಕೆಳಕ್ಕೆ ತೂಗಾಡುವುದು ಕಂಡುಬಂದಿತ್ತು. ಹೆಲಿಕಾಪ್ಟರ್‌ನಿಂದ ವಿಚಿತ್ರ ಶಬ್ಧಗಳು ಕೇಳಿಬರುತ್ತಿರು ಪರಿಶೀಲನೆಗೆ ಮುಂದಾದಾಗ ಸೈನಿಕರಿಬ್ಬರು ಅರೆಬೆತ್ತಲಾಗಿ ಚಾಪರ್ ಹಿಂಬದಿಯ ಕಾಕ್‌ಪಿಟ್‌ನಲ್ಲಿ ಸೆಕ್ಸ್ ಮಾಡುತ್ತಿರುವುದು ಕಂಡುಬಂದಿದೆ. ಪುರುಷ ಸೈನಿಕ ಸೇನಾ ಸಮವಸ್ತ್ರದಲ್ಲಿದ್ದರೆ, ಮಹಿಳೆ ಸಾಮಾನ್ಯ ಉಡುಪಿನಲ್ಲಿದ್ದಳು ಎಂದು ವರದಿಗಳು ತಿಳಿಸಿವೆ.
ಬಳಿಕ ಇಬ್ಬರ ವಿರುದ್ಧ ಕ್ರಮ ಜರುಗಿಸಲು ಮಿಲಿಟರಿ ಏವಿಯೇಷನ್ ಅಥಾರಿಟಿಗೆ ವರದಿ ನೀಡಲಾಯಿತು. ಪುರುಷ ಸೈನಿಕನು 653 ಸ್ಕ್ವಾಡ್ರನ್‌ನ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇನ್ನೂ ಕೆಲ ಸ್ಥಳೀಯ ವರದಿಗಳ ಪ್ರಕಾರ, 2016ರಲ್ಲಿ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಗುಜರಾತ್ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತು ವಶ – 8 ಮಂದಿ ಇರಾನ್ ಪ್ರಜೆಗಳು ಅರೆಸ್ಟ್