ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದ್ದು, ಇಂದು ಹಾಗೂ ನಾಳೆ ಹಲವೆಡೆ ಮಳೆ (Rain) ಮುನ್ಸೂಚನೆ ನೀಡಲಾಗಿದೆ. ರಾಯಲಸೀಮೆಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಟ್ರಫ್ ಹಿನ್ನೆಲೆ ಕೆಲವೆಡೆ ಧಾರಾಕಾರ ಗುಡುಗು ಮಿಂಚು ಸೇರಿ ಮಳೆ ಸುರಿಯಲಿದೆ.
ಬೆಂಗಳೂರು (Benagaluru) ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ 2 ದಿನ ವರುಣನ ಆರ್ಭಟ ಹೆಚ್ಚಿರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಚಾಮರಾಜನಗರ, ಕೊಡಗು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
Advertisement
Advertisement
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಸೋಮವಾರ) ಮಳೆಯ ಅಬ್ಬರ ಕೊಂಚ ಜೋರಾಗೇ ಇತ್ತು. ನಿನ್ನೆ ಸಂಜೆ ಆರಂಭವಾದ ಮಳೆ ರಾತ್ರಿಯವರೆಗೂ ಸುರಿದಿದ್ದು ಅನೇಕ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಟ ನಡೆಸಿದರು. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಆಗುತ್ತಾ?
Advertisement
Advertisement
ಕಳೆದ ಮುಂಗಾರು ಕೈಕೊಟ್ಟ ಬಳಿಕ ಮಳೆ ಕಾಣದೆ ಕಂಗಾಲಾಗಿದ್ದ ಕರುನಾಡಿಗೆ ಸದ್ಯ ವರುಣ ದೇವ ಕೊಂಚ ರಿಲ್ಯಾಕ್ಸ್ ನೀಡುತ್ತಿದ್ದಾನೆ. ರಾಜ್ಯಕ್ಕೆ ಹಿಂಗಾರು ಅಧಿಕೃತ ಎಂಟ್ರಿ ಬೆನ್ನಲ್ಲೆ ರಾಜ್ಯದ ಅನೇಕ ಕಡೆ ಮಳೆ ಆರಂಭವಾಗಿದೆ. ಸಿಲಿಕಾನ್ ಸಿಟಿಯಲ್ಲೂ ನಿನ್ನೆ ರಾತ್ರಿ ಜೋರು ಮಳೆಯಾಗಿದ್ದು, ಕೆಲವೆಡೆ ಮಳೆಯಿಂದ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‍ಗೆ ತುಂಬಿತು 60 ವರ್ಷ- ಉಡುಪಿ ಶ್ರೀಕೃಷ್ಣನ ನಗರ ಕೇಸರಿಮಯ
Web Stories