ಪಾಟ್ನಾ: ದೇವರ ಪೊಜೆ ವೇಳೆ ನೂಕುನುಗ್ಗಲು ಉಂಟಾಗಿ ಇಬ್ಬರು ಪುಟಾಣಿಗಳು ಕಾಲ್ತುಳಿತದಿಂದ ಸಾವನ್ನಪ್ಪಿರುವ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದೆ.
ಔರಂಗಾಬಾದ್‌ನ ಸೂರ್ಯಕುಂಡದಲ್ಲಿ ನಡೆದ ಚಠ್ ಪೂಜೆಯಲ್ಲಿ ಈ ಘಟನೆ ನಡೆದಿದ್ದು, ಕಾಲ್ತುಳಿತಕ್ಕೆ ಪಾಟ್ನಾದ ಬಿಹ್ತಾ ಮೂಲದ ಆರು ವರ್ಷದ ಬಾಲಕ ಮತ್ತು ಭೋಜ್‌ಪುರದ 18 ತಿಂಗಳ ಬಾಲಕಿ ಸಾವನ್ನಪ್ಪಿದ್ದಾರೆ.
Advertisement
Advertisement
ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶನಿವಾರ ನಡೆದ ಚಠ್ ಪೂಜೆಗೆ ನಿರೀಕ್ಷೆಗೆ ಮೀರಿದ ಭಕ್ತರು ಬಂದಿದ್ದು, ಜನರು ನಿಯಂತ್ರಿಸಲು ಆಗದ ಕಾರಣ ಈ ಘಟನೆ ನಡೆದಿದೆ. ಆದರೆ ಘಟನೆ ಸಂಭವಿಸಿದ ತಕ್ಷಣ ನಮ್ಮ ಅಧಿಕಾರಿಗಳು ಜನರನ್ನು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸೂರ್ಯಕುಂಡ ಜಿಲ್ಲೆಯ ಜಿಲ್ಲಾಧಿಕಾರಿ ರಂಜನ್ ಮಹಿವಾಲ್ ಅವರು, ನಾನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎಸ್‌ಪಿ ದೀಪಕ್ ಬಾರ್ನ್ವಾಲ್ ಅವರನ್ನು ಭೇಟಿಯಾಗಿದ್ದೇನೆ. ಪೂಜೆ ಸಮಯದಲ್ಲಿ ನಾವು ನಿರೀಕ್ಷೆಗೂ ಮೀರಿದ ಜನರು ಬಂದ ಕಾರಣ ಈ ಘಟನೆಯಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಮತ್ತು ಸಾವನ್ನಪ್ಪಿದವರಿಗೆ ಸರ್ಕಾರದ ಕಡೆಯಿಂದ ಪರಿಹಾರದ ಹಣ ನೀಡಿದ್ದೇವೆ ಎಂದು ಹೇಳಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.