ಚಾಮರಾಜನಗರ: ವಿಧಾನಸಭೆ ಚುನಾವಣೆ ಹತ್ತಿರವಾಗ್ತಿರುವಂತೆ ರಾಜಕಾರಣಿಗಳು ಗೂಬೆಗಳ ಹಿಂದೆ ಬಿದ್ದಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಲಕ್ಷ-ಲಕ್ಷ ರೂಪಾಯಿಗೆ ಗೂಬೆಗಳು ಮಾರಾಟವಾಗ್ತಿವೆ. ಹೀಗೆ ಗೂಬೆಗಳನ್ನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೊಳ್ಳೆಗಾಲದಲ್ಲಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಅದೃಷ್ಟದ ಗೂಬೆಗಳನ್ನು ಖರೀದಿಸಿದ್ರೆ ಲಕ್ ಖುಲಾಯಿಸುತ್ತೆ, ಎಲೆಕ್ಷನ್‍ನಲ್ಲಿ ಪಕ್ಕಾ ಗೆಲ್ತೀವಿ ಅನ್ನೋದು ಕೆಲ ರಾಜಕಾರಣಿಗಳ ನಂಬಿಕೆ. ಇದನ್ನೇ ಬಂಡವಾಳ ಮಾಡ್ಕೊಂಡಿರುವ ಮಂದಿ ಗೂಬೆಗಳನ್ನು ಮಾರಾಟ ಮಾಡ್ತಿದ್ದಾರೆ.
Advertisement
Advertisement
ಈ ದಂಧೆ ನಡೆಸ್ತಿದ್ದ ಕೊಳ್ಳೆಗಾಲ ತಾಲೂಕಿನ ಸೂಳೆಕೋಬೆಯ ಕೆಂಪಯ್ಯ ಮತ್ತು ಸಂಬೇಗೌಡ ಅನ್ನೋರನ್ನು ಪೊಲೀಸರು ಬಂಧಿಸಿದ್ದು, 2.5 ಕೆ.ಜಿ ತೂಕದ ಗೂಬೆಯನ್ನು ವಶಕ್ಕೆ ಪಡೆದಿದ್ದಾರೆ.
Advertisement
ಒಂದು ಕಡೆ ರಾಜ್ಯದಲ್ಲಿ ರಾಜಕೀಯದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತ್ತೊಂದೆಡೆ ಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ರಾಜಕೀಯ ಮುಖಂಡರು ಮೂಢನಂಬಿಕೆಯ ಮೊರೆ ಹೋಗ್ತಿದ್ದಾರೆ.
Advertisement