ಮೈಸೂರು: ಆನ್‌ಲೈನ್ ಟ್ರೇಡಿಂಗ್ (Online Trading) ಹೆಸರಿನಲ್ಲಿ ಉದ್ಯಮಿಗೆ 2.96 ಕೋಟಿ ರೂ. ವಂಚಿಸಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
30 ವರ್ಷ ವಯಸ್ಸಿನ ವ್ಯಾಪಾರಿಗೆ ಖದೀಮರು ಪಂಗನಾಮ ಹಾಕಿದ್ದಾರೆ. ವಂಚನೆಗೆ ಒಳಗಾದ ವ್ಯಾಪಾರಿ ಆನ್‌ಲೈನ್ ಟ್ರೇಡಿಂಗ್, ಷೇರ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಒಂದು ತಿಂಗಳಿಗೆ ದ್ವಿಗುಣ ಲಾಭದ ಆಸೆ ಹೊಂದಿದ್ದರು. ಆನ್‌ಲೈನ್‌ನಲ್ಲಿ ಅವರು ಕೇಳಿದ ಎಲ್ಲಾ ಬ್ಯಾಂಕ್ ಡಿಟೇಲ್ಸ್, ಎಟಿಎಂ ಕೋಡ್, ಆಧಾರ್ ನಂಬರ್ ಮತ್ತಿತರ ಮಾಹಿತಿಗಳನ್ನ ಅಪ್‌ಲೋಡ್ ಮಾಡಿದ್ದರು. ಇದನ್ನೂ ಓದಿ: ಸೂರಜ್ ರೇವಣ್ಣ ಬಂಧನ ಕೇಸ್ – ಇವೆಲ್ಲ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣ: ಪ್ರಿಯಾಂಕ್ ಖರ್ಗೆ
Advertisement
Advertisement
ಸತತ ನಾಲ್ಕು ದಿನಗಳ ಕಾಲ ಆನ್‌ಲೈನ್ ಬ್ಯಾಂಕ್‌ಗೆ ಸಂಬಂಧಪಟ್ಟ ಮಾಹಿತಿ ಹಂಚಿಕೊಂಡಿದ್ದರು. ಕಳೆದ ಶುಕ್ರವಾರ ತಮ್ಮ ಬ್ಯಾಂಕ್ ಖಾತೆಯಿಂದ ಏಕಾಏಕಿ 2.96 ಕೋಟಿ ವರ್ಗಾವಣೆ ಆಗಿದೆ. ಯಾವುದೇ ವಹಿವಾಟು ನಡೆಸದಿದ್ದರೂ ಬ್ಯಾಂಕ್ ಅಕೌಂಟ್‌ನಿಂದ ಹಣ ಡೆಬಿಟ್ ಆಗಿರುವದನ್ನು ಕಂಡು ವ್ಯಾಪಾರಿ ಶಾಕ್‌ಗೆ ಒಗೊಳಗಾಗಿದ್ದಾರೆ. ಪ್ರಕರಣ ಸಂಬಂಧ ನಜರಾಬಾದ್‌ನಲ್ಲಿರುವ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement
Advertisement
ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿಯ ಸಂಗತಿ ಗೊತ್ತಾಗಿದೆ. ಒಬ್ಬನೇ ವ್ಯಕ್ತಿಯಿಂದ ಒಂದೇ ದಿನ 2.96 ಕೋಟಿ ಹಣ ಟ್ರಾನ್ಸಫರ್ ಆಗಿದೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಇನ್ನಷ್ಟು ಹಣ ಸಂಪಾದನೆ ಮಾಡಲು ಹೋಗಿ ವ್ಯಾಪಾರಿ ಕೈ ಸುಟ್ಟುಕೊಂಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆಸಿರುವ ಸೆನ್ ಪೊಲೀಸರು. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ದರ್ಶನ್ – ʻದಾಸʼನ ಜೈಲು ದಿನಚರಿ ಹೇಗಿದೆ?