ರಾಯಪುರ: ಪಾರ್ಕ್ ಮಾಡಿರುವ ಕಾರಿನಲ್ಲಿದ್ದ (Car) 2.64 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದಿರುವ ಘಟನೆ ಛತ್ತೀಸ್‌ಗಢದ (Chhatisgarh) ದುರ್ಗ್ (Durg) ಜಿಲ್ಲೆಯಲ್ಲಿ ನಡೆದಿದೆ.
ಸೆಕ್ಟರ್-1 ಪ್ರದೇಶದ ಬ್ಯಾಂಕ್ ಬಳಿ ಅನುಮಾಸ್ಪದವಾಗಿ ಮೂರು ಕಾರುಗಳು ಪಾರ್ಕ್ ಮಾಡಲಾಗಿತ್ತು. ವಾಹನಗಳ ನಿಲುಗಡೆ ಬಗ್ಗೆ ಮಾಹಿತಿ ಪಡೆದ ಭಿಲಾಯಿ ಭಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಪರಧ ನಿಗ್ರಹ ಮತ್ತು ಸೈಬರ್ ಘಟದ ಜಂಟಿ ತಂಡ ತಲುಪಿದೆ. ಇದನ್ನೂ ಓದಿ: ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ರಾಹುಲ್ ಗಾಂಧಿ ಕಾರಿನ ಗಾಜು ಪುಡಿಪುಡಿ
ಎರಡು ವಾಹನಗಳಿಲ್ಲಿದ್ದ ಮೂವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ತಪಾಸಣೆ ವೇಳೆ ಕಾರಿನಲ್ಲಿ 2.64 ಕೋಟಿ ರೂಪಾಯಿಗಳ ನಗದು ಪತ್ತೆಯಾಗಿದೆ. ಮೂವರು ವ್ಯಕ್ತಿಗಳನ್ನು ಪೊಲೀಸರು ಪ್ರಶ್ನೆ ಮಾಡಿದ್ದು, ತೃಪ್ತಿದಾಯಕ ಉತ್ತರವನ್ನು ನೀಡಲು ವಿಫಲವಾದ ಕಾರಣ ನಗದನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ
ನಗದನ್ನು ವಶ ಪಡಿಸಿಕೊಂಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಯುವತಿಯಿಂದ ಹಲ್ಲೆ