ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದ್ದು, ಬರೋಬ್ಬರಿ 2.27 ಕೋಟಿ ರೂ. ಸಂಗ್ರಹವಾಗಿದೆ.
Advertisement
ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೂ ನಡೆದಿದ್ದು, ಈ ತಿಂಗಳಿನಲ್ಲಿ ಬರೋಬ್ಬರಿ 2,27,66,834 ರೂ. ನಗದು ಜೊತೆಗೆ 59 ಗ್ರಾಂ ಚಿನ್ನ, 3.8 ಕೆಜಿ ಬೆಳ್ಳಿಯನ್ನು ಭಕ್ತರು ಮಾದಪ್ಪನಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ. ಅಷ್ಟಾಗಿ ಯಾವುದೇ ಸೇವೆ ಮತ್ತು ರಥೋತ್ಸವ ಜರುಗದೇ ಇದ್ದರೂ ಭಕ್ತರು ಕಾಣಿಕೆ ರೂಪದಲ್ಲಿ ಹಣದ ಹೊಳೆಯನ್ನೇ ಹರಿಸುವ ಮೂಲಕ ಮತ್ತೆ ಮಾದಪ್ಪನನ್ನು ಕೋಟ್ಯಧೀಶನನ್ನಾಗಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ
Advertisement
Advertisement
ಈ ಮುನ್ನ ಅಕ್ಟೋಬರ್‌ನಲ್ಲಿ ಕೊರೊನಾ ಇದ್ದರೂ ಸಹ 2.62 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಈ ವೇಳೆ 170 ಗ್ರಾಂ ಚಿನ್ನ, 3.7 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 2,62,76,718 ರೂ. ಗಳಿಕೆಯಾಗಿತ್ತು. ಇದನ್ನೂ ಓದಿ: ರಾಜ್ಯದ 58 ಪುರಸಭೆ, 57 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು