ಶಾರ್ಜಾ: ಇಂದು ಶಾರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 23ನೇ ಮ್ಯಾಚಿನಲ್ಲಿ ಡೆಲ್ಲಿ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 185 ರನ್‍ಗಳ ಟಾರ್ಗೆಟ್ ನೀಡಿದೆ.
ಆರಂಭದಲ್ಲೇ ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಾಸ್ ಐಯ್ಯರ್ ಮತ್ತು ರಿಷಭ್ ಪಂತ್ ಔಟ್ ಆಗಿ ಡೆಲ್ಲಿ ತಂಡಕ್ಕೆ ಆಘಾತ ನೀಡಿದರು. ಟಾಪ್ ಆರ್ಡರ್ ಬ್ಯಾಟ್ಸ್‍ಮ್ಯಾನ್‍ಗಳನ್ನು ಕಳೆದುಕೊಂಡ ಡೆಲ್ಲಿ ತಂಡಕ್ಕೆ ಮಿಡಲ್ ಆರ್ಡರ್ ಬ್ಯಾಟ್ಸ್ ಮ್ಯಾನ್‍ಗಳು ಕೈ ಹಿಡಿದರು. ಅಬ್ಬರದ ಬ್ಯಾಟಿಂಗ್ ಮುಂದಾದ ಮಾರ್ಕಸ್ ಸ್ಟೋಯಿನಿಸ್ 39 ಮತ್ತು ಶಿಮ್ರಾನ್ ಹೆಟ್ಮಿಯರ್ ಅವರು 45 ರನ್ ಹೊಡೆದು ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದರು.
Advertisement
Kartik Tyagi gets his man! Tewatia with a great catch in the deep and Hetmyer has to depart.#DelhiCapitals six down with 149 runs on the board.#Dream11IPL #RRvDC pic.twitter.com/khs527nIKq
— IndianPremierLeague (@IPL) October 9, 2020
Advertisement
ಟಾಸ್ ಸೋತು ಬ್ಯಾಟ್ ಮಾಡಲು ಬಂದ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ, ಜೋಫ್ರಾ ಆರ್ಚರ್ ಅವರು ಆರಂಭಿಕ ಆಘಾತ ನೀಡಿದರು. ಓಪನರ್ ಆಗಿ ಕಾಣಕ್ಕೆ ಬಂದ ಅನುಭವಿ ಆಟಗಾರ ಶಿಖರ್ ಧವನ್ ಕೇವಲ 5 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಅವರು ಹಿಡಿದು ಸೂಪರ್ ಕ್ಯಾಚಿಗೆ ಬಲಿಯಾದರು. ನಂತರ ಜೊತೆಯಾದ ಶ್ರೇಯಾಸ್ ಐಯ್ಯರ್ ಮತ್ತು ಪೃಥ್ವಿ ಶಾ ಅಬ್ಬರದ ಆಟಕ್ಕೆ ಮುಂದಾದರು. ಆದರೆ ಜೋಫ್ರಾ ಆರ್ಚರ್ ಬೌನ್ಸರ್ ಗೆ 19 ರನ್ ಗಳಿಸಿ ಆಡುತ್ತಿದ್ದ ಪೃಥ್ವಿ ಶಾ ಕ್ಯಾಚ್ ಕೊಟ್ಟು ಹೊರನಡೆದರು.
Advertisement
Another one bites the dust. It's Stoinis who departs after scoring 39 runs.
Tewatia with his first wicket of the game.#Dream11IPL #RRvDC pic.twitter.com/nFFIE1xubf
— IndianPremierLeague (@IPL) October 9, 2020
Advertisement
ಇದಾದ ನಂತರ 5ನೇ ಓವರಿನ 5ನೇ ಬಾಲಿನಲ್ಲಿ 18 ಬಾಲಿಗೆ 22 ರನ್ ಗಳಿಸಿದ ನಾಯಕ ಶ್ರೇಯಸ್ ಐಯ್ಯರ್ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು 51 ರನ್ ಸೇರಿಸಿತು. ನಂತರ ತಾಳ್ಮೆಯ ಆಟಕ್ಕೆ ಮುಂದಾದ ರಿಷಭ್ ಪಂತ್ ಅವರು 9 ಬಾಲಿಗೆ ಐದು ರನ್ ಗಳಿಸಿ ರನ್ ಔಟ್ ಆಗಿ ಪೆವಿಲಿಯನ್ ಸೇರಿದರು.
WATCH – Jaiswal's rocket throw gets Iyer out.
Excellent fielding, rocket throw, direct hit. Shreyas Iyer walks back.https://t.co/cPpLAgGb3o #Dream11IPL #RRvDC
— IndianPremierLeague (@IPL) October 9, 2020
ನಂತರ ಹೊಂದಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಶಿಮ್ರಾನ್ ಹೆಟ್ಮಿಯರ್ ಬಿರುಸಿನ ಆಟಕ್ಕೆ ಮುಂದಾದರು. ಪರಿಣಾಮ 13 ಓವರ್ ಮುಕ್ತಾಯಕ್ಕೆ ಡೆಲ್ಲಿ ಕ್ಯಾಪಿಟಲ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 107 ರನ್ ಸೇರಿಸಿತ್ತು. ಆದರೆ 13ನೇ ಓವರಿನ ಮೂರನೇ ಬಾಲಿನಲ್ಲಿ 30 ಎಸೆತಕ್ಕೆ 39 ರನ್ ಗಳಿಸಿ ಆಡುತ್ತಿದ್ದ ಮಾರ್ಕಸ್ ಸ್ಟೋಯಿನಿಸ್ ಅವರನ್ನು ರಾಹುಲ್ ತೇವಟಿಯಾ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು.
WATCH – How Archer setup Shaw.
Bowls a bouncer, gets pulled for a boundary. Bowls a bouncer again – Prithvi Shaw is out. Brilliant bowling from @JofraArcher.https://t.co/TlTq2R1XHF #Dream11IPL #RRvDC
— IndianPremierLeague (@IPL) October 9, 2020
ನಂತರ 24 ಬಾಲಿಗೆ 45 ರನ್ ಸಿಡಿಸಿ ಅಬ್ಬರಿಸುತ್ತಿದ್ದ ಶಿಮ್ರಾನ್ ಹೆಟ್ಮಿಯರ್ 16ನೇ ಓವರಿನ ಕೊನೆಯ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಗೆರಯ ಬಳಿ ರಾಹುಲ್ ತೇವಟಿಯಾ ಅವರಿಗೆ ಕ್ಯಾಚ್ ನೀಡಿದರು. ನಂತರ 18ನೇ ಓವರಿನ ಕೊನೆಯ ಬಾಲಿನಲ್ಲಿ ಅಕ್ಷರ್ ಪಟೇಲ್ ಅವರು ಎಂಟು ಬಾಲಿಗೆ 17 ರನ್ ಸಿಡಿಸಿ ಕೀಪರ್ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಕೊನೆ ಓವರಿನಲ್ಲಿ ಹರ್ಷಲ್ ಪಟೇಲ್ ಅವರು ಕೂಡ ಕ್ಯಾಚ್ ಕೊಟ್ಟು ಹೊರನಡೆದರು.