2 ದಿನ ವೀಕೆಂಡ್ ಲಾಕ್‌ಡೌನ್ – ಯಾವುದಕ್ಕೆ ಅನುಮತಿ? ಯಾವುದು ಬಂದ್?

Public TV
2 Min Read
lockdown bengaluru corona

ಬೆಂಗಳೂರು: ರೂಪಾಂತರಿ ಕೊರೊನಾ ಏಪ್ರಿಲ್ ತಿಂಗಳಲ್ಲಿ ದಿನಕ್ಕೊಂದು ಅವತಾರದಲ್ಲಿ ಕಾಡುತ್ತಿದೆ. ಮಹಾಮಾರಿಯ ಚೈನ್ ಲಿಂಕ್ ಬ್ರೇಕ್ ಮಾಡಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂ ಇಂದು ರಾತ್ರಿ 9 ಗಂಟೆಯಿಂದ ಜಾರಿಯಾಗಲಿದೆ.

ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅಗತ್ಯ ವಸ್ತುಗಳು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮದುವೆಗಳಲ್ಲಿ 50 ಮಂದಿಯಷ್ಟೇ ಭಾಗಿಯಾಗಲು ಅವಕಾಶ ಕೊಟ್ಟಿದ್ದು, ರಾತ್ರಿ 9 ಗಂಟೆಯೊಳಗೆ ಕಲ್ಯಾಣಮಂಟಪ ಸೇರಲು ಸೂಚಿಸಲಾಗಿದೆ. ಸ್ವಿಗ್ಗಿ, ಜೋಮ್ಯಾಟೋಗೆ ಫುಡ್ ಡೆಲಿವರಿಗೆ ಅವಕಾಶ ಕೊಟ್ಟಿದ್ದು, ದುರ್ಬಳಕೆ ತಡೆಗೆ ನಿಗಾ ವಹಿಸಲಾಗಿದೆ.

Bengaluru Lockdown Police 6

ಬೇಕಾಬಿಟ್ಟಿ ಓಡಾಡಿದರೆ ದಂಡ ಹಾಕುವುದರ ಜೊತೆ ಪೊಲೀಸರು ಕೇಸ್ ಹಾಕುತ್ತಾರೆ. ಅಷ್ಟೇ ಅಲ್ಲದೇ ವಾಹನಗಳು ಜಪ್ತಿಯಾಗಲಿದೆ. ಕೆಎಸ್‌ಆರ್‌ಟಿಸಿ ದೂರ ಪ್ರಯಾಣಿಕಕ್ಕೆ ಅವಕಾಶ ಕಲ್ಪಿಸಿದ್ದು, ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಸೇವೆ ಮುಂದುವರೆಕೆಗೆ ತೀರ್ಮಾನಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಇವತ್ತು ರಾತ್ರಿಯಿಂದಲೇ ಬಿಎಂಟಿಸಿ 2 ದಿನ ಸಂಚಾರ ನಿಲ್ಲಿಸ್ತಿವೆ. ತುರ್ತು ಸೇವೆಗೆ ಕೇವಲ 500 ಬಸ್‌ಗಳಷ್ಟೇ ಆಪರೇಟ್ ಆಗಲಿವೆ. ನಮ್ಮ ಮೆಟ್ರೋ 2 ದಿನ ಸಂಪೂರ್ಣ ಸಂಚಾರ ನಿಲ್ಲಿಸಿದೆ. ಜೊತೆಗೆ, ವೀಕ್‌ಡೇಸ್‌ನಲ್ಲೂ ರಾತ್ರಿ 7:30ಕ್ಕೆ ಸೇವೆ ಬಂದ್ ಆಗಲಿದೆ.

ಯಾವುದಕ್ಕೆ ಅನುಮತಿ?
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಕೆಲ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹಣ್ಣು-ತರಕಾರಿ, ದಿನಸಿ, ಮಾಂಸ, ಹಾಲು ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದ್ದರೂ ಪಾರ್ಸೆಲ್, ಹೋಂ ಡೆಲಿವರಿಗಷ್ಟೇ ಅವಕಾಶ ನೀಡಲಾಗಿದೆ.

Bengaluru Lockdown Police 8

ಟಿಕೆಟ್ ಇದ್ದರಷ್ಟೇ ಅನುಮತಿ:
ಕೆಎಸ್‌ಆರ್‌ಟಿಸಿ (ದೂರ ಪ್ರಯಾಣವಷ್ಟೇ) ಪರಿಸ್ಥಿತಿ ನೋಡಿಕೊಂಡು ಸಂಚಾರ ರದ್ದು
ಕ್ಯಾಬ್ (ಪಿಕಪ್, ಡ್ರಾಪ್ ಮಾತ್ರ)
ಆಟೋ (ಪಿಕಪ್. ಡ್ರಾಪ್ ಮಾತ್ರ)
ಬಸ್, ರೈಲು, ವಿಮಾನ ನಿಲ್ದಾಣ ಸಂಚಾರ

ಷರತ್ತಿನ ಅನುಮತಿ:
ಮದುವೆ: 50 ಮಂದಿಗಷ್ಟೇ ಅವಕಾಶ (ಪಾಸ್ ಇದ್ದರಷ್ಟೇ ಅನುಮತಿ – ರಾತ್ರಿ 9 ಗಂಟೆ ಒಳಗೆ ಕಲ್ಯಾಣ ಮಂಟಪ ಸೇರಿಕೊಳ್ಳಬೇಕು)
ಅಂತ್ಯಸಂಸ್ಕಾರ: 20 ಮಂದಿಗಷ್ಟೇ ಅನುಮತಿ

Bengaluru Lockdown Police 4

ಯಾರೆಲ್ಲಾ ಓಡಾಡಬಹುದು?
* ಅನಾರೋಗ್ಯಪೀಡಿತರು (ಒಬ್ಬರು ಜೊತೆಗೆ ಹೋಗಬಹುದು)
* ವ್ಯಾಕ್ಸಿನ್ ಪಡೆದುಕೊಳ್ಳುವವರು ( ಐಡಿ ಕಾರ್ಡ್ ಕಡ್ಡಾಯ)
* ತುರ್ತು ಸೇವೆ ಒದಗಿಸುವವರು (ಐಡಿ ಕಾರ್ಡ್ ಕಡ್ಡಾಯ)
* ಆರೋಗ್ಯ, ವೈದ್ಯಕೀಯ ಸಿಬ್ಬಂದಿ (ಐಡಿ ಕಾರ್ಡ್ ಕಡ್ಡಾಯ)
* ಮಾಧ್ಯಮ, ಪೊಲೀಸ್ ಸಿಬ್ಬಂದಿ (ಐಡಿ ಕಾರ್ಡ್ ಕಡ್ಡಾಯ)
* ಕೇಬಲ್, ಟೆಲಿಕಾಂ, ಇಂಟರ್‌ನೆಟ್ ಸಿಬ್ಬಂದಿ (ಐಡಿ ಕಾರ್ಡ್ ಕಡ್ಡಾಯ)

LOCKDOWN 2

ಇಡೀ ದಿನ ಓಪನ್:
ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು, ಕ್ಲಿನಿಕ್‌ಗಳು, ಅಗತ್ಯ, ತುರ್ತು ಸೇವೆ ನೀಡುವ ಕಚೇರಿಗಳು, ಎಟಿಎಂಗಳು, ಪೆಟ್ರೋಲ್ ಬಂಕ್‌ಗಳು, ಎಲ್ಲಾ ರೀತಿಯ ಕೈಗಾರಿಕೆಗಳು, ಎಲ್ಲಾ ರೀತಿಯ ಹೋಂ ಡೆಲಿವರಿ.

ಇಡೀ ದಿನ ಬಂದ್
ಪಾರ್ಕ್ ಗಳು, ಮಾರುಕಟ್ಟೆಗಳು, ಸೂಪರ್ ಮಾರ್ಕೆಟ್‌ಗಳು, ಪಬ್, ಕ್ಲಬ್, ಬಾರ್‌ಗಳು, ಶಾಂಪಿಂಗ್ ಮಾಲ್, ಜಿಮ್‌ಗಳು, ಥಿಯೇಟರ್‌ಗಳು, ಪ್ರವಾಸಿ ತಾಣಗಳು, ಬೇಕರಿಗಳು, ದೇವಸ್ಥಾನ, ಚರ್ಚ್, ಮಸೀದಿಗಳು, ಧಾರ್ಮಿಕ, ರಾಜಕೀಯ ಸಭೆ-ಸಮಾರಂಭಗಳು, ಹಾಲ್‌ಗಳು, ಆಡಿಟೋರಿಯಂಗಳು, ಕೋಚಿಂಗ್ ಸೆಂಟರ್‌ಗಳು, ನಿರ್ಮಾಣ ಕೆಲಸಗಳು.

Share This Article
Leave a Comment

Leave a Reply

Your email address will not be published. Required fields are marked *