ತಿರುವನಂತಪುರಂ: ಬೀದಿ ನಾಯಿಗಳ ಪ್ರೀತಿಗೆ ಕಟ್ಟುಬಿದ್ದು ಬ್ರಿಟನ್ ದಂಪತಿ ತಮ್ಮ ದೇಶಕ್ಕೆ ಮರಳಿ ಹೋಗದೇ ಕೇರಳದಲ್ಲಿಯೇ ಉಳಿದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಕಳೆದ 12 ವರ್ಷಗಳ ಹಿಂದೆ 2 ವಾರಗಳ ರಜೆಗೆ ಕೇರಳಕ್ಕೆ ಪ್ರವಾದ ಬಂದಿದ್ದ ಮೇರಿ ಮತ್ತು ಸ್ಟೀವ್ ಮಸ್ಕ್ರಾಫ್ಟ್ ದಂಪತಿ ಕೇರಳದ ಕೋವಳಂನ ಬೀದಿ ನಾಯಿಗಳಿಗೆ ಆಕರ್ಷಿತರಾಗಿ ಭಾರತದಲ್ಲೇ ಉಳಿದಿದ್ದಾರೆ.
ಮೊದಲು 2 ನಾಯಿಗಳನ್ನು ಸಾಕಿದ್ದರು. ಆದರೆ ಇದೀಗ ಬರೋಬ್ಬರಿ 140 ನಾಯಿಗಳನ್ನು ಈ ದಂಪತಿ ಸಾಕಿದ್ದಾರೆ. ಈ ನಾಯಿಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. 12 ವರ್ಷಗಳ ಹಿಂದೆ ತಮ್ಮ ದೇಶಕ್ಕೆ ಹೋಗಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ನಾಯಿಗಳ ಪ್ರೀತಿ ಅವರನ್ನು ಇಲ್ಲಿಯೇ ಇರುವಂತೆ ಮಾಡಿದೆ ಎಂದು ದಂಪತಿ ಹೇಳುತ್ತಾರೆ.
ನಮ್ಮಲ್ಲಿ 140 ನಾಯಿಗಳಿವೆ. ಬೇರೆ ಬೇರೆ ಕಡೆಯಿಂದ ತಂದು ಸಾಕಿದ್ದೇವೆ ಇದೀಗ ಸ್ಟ್ರೀಮ್ ಡಾಗ್ ವಾಚ್ ಎಂಬ ಎನ್‍ಜಿಒ ಅನ್ನು ಪ್ರಾರಂಭಿಸಿದ್ದೇವೆ. ನಾಯಿಗಳನ್ನು ಸಾಕುವುದು ಮತ್ತು ಅವುಗಳ ಆರೋಗ್ಯವನ್ನು ನಾವು ನೋಡಿಕೊಳ್ಳುತ್ತಿದ್ದೇವೆ ಎಂದು ದಂಪತಿ ಹೇಳಿದ್ದಾರೆ.