ಬರ್ಮಿಂಗ್ಹ್ಯಾಮ್: 6ನೇ ದಿನದ ಕಾಮನ್ವೆಲ್ತ್ನಲ್ಲಿ ಒಟ್ಟು 5 ಪದಕಗಳು ಭಾರತದ ಪಾಲಾಗಿವೆ. ಈ ಮೂಲಕ ಭಾರತ ಒಟ್ಟು 18 ಪದಕಗಳನ್ನು ಗೆಲ್ಲುವ ಮೂಲಕ ಟಾಪ್-10 ಪಟ್ಟಿಯಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ.
https://twitter.com/sbg1936/status/1554919985273008128?ref_src=twsrc%5Etfw%7Ctwcamp%5Etweetembed%7Ctwterm%5E1554919985273008128%7Ctwgr%5E2b19147abf6ca3cf642463a445fec7f52d6ec806%7Ctwcon%5Es1_&ref_url=https%3A%2F%2Fsports.ndtv.com%2Fcommonwealth-games-2022%2Fhow-tejaswin-shankar-won-bronze-medal-for-india-in-high-jump-at-cwg-2022-watch-3223093
Advertisement
ಭಾರತದ ತೇಜಸ್ವಿನ್ ಶಂಕರ್ ಅಥ್ಲೆಟಿಕ್ನಲ್ಲಿ ಪುರುಷರ ಹೈಜಂಪ್ ಫೈನಲ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪುರುಷ ವಿಭಾಗದ ಹೈಜಂಪ್ (ಎತ್ತರ ಜಿಗಿತ) ಫೈನಲ್ಸ್ನಲ್ಲಿ 2.22 ಮೀಟರ್ ಎತ್ತರ ಜಿಗಿಯುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ. ಫೈನಲ್ಸ್ನಲ್ಲಿ ಕಾಮನ್ವೆಲ್ತ್ ಮಾಜಿ ಚಾಂಪಿಯನ್ ಡೊನಾಲ್ಡ್ ಥಾಮಸ್ ಅವರೊಂದಿಗೆ ಟೈ ಆಗಿದ್ದು ಕಂಚಿನ ಪದಕವನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಮೂಲಕ ಅಥ್ಲೆಟಿಕ್ಸ್ ಹೈಜಂಪ್ನಲ್ಲಿ ಮೊದಲ ಬಾರಿಗೆ ಪದಕ ಗೆದ್ದ ಕೀರ್ತಿ ತೇಜಸ್ವಿನ್ ಅವರದ್ದಾಗಿದೆ.
Advertisement
Hardwork and dedication leads to outstanding outcomes…this is what Gurdeep Singh has shown by winning the Bronze medal in weightlifting at the CWG. He has furthered the spirit of joy among our citizens. Congratulations and best wishes to him. pic.twitter.com/DoudsoAKEG
— Narendra Modi (@narendramodi) August 4, 2022
Advertisement
ಗುರ್ದೀಪ್ಸಿಂಗ್ ಮಿಂಚು: ಪುರುಷರ ವಿಭಾಗದ 109 ಕೆ.ಜಿ. ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಒಟ್ಟು 390 ಕೆಜಿ ಭಾರ ಎತ್ತುವ ಮೂಲಕ ಗುರ್ದೀಪ್ಸಿಂಗ್ ಕಂಚಿನ ಹಾರಕ್ಕೆ ಕೊರಳೊಡ್ಡಿದ್ದಾರೆ. ಸ್ನ್ಯಾಚ್ ವಿಭಾಗದಲ್ಲಿ 167 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ನಲ್ಲಿ 223 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ ಗೆಲುವು ಸಾಧಿಸಿದ್ದಾರೆ.