– 1951-52 ರಲ್ಲಿ ನಡೆದಿದ್ದ ಮೊದಲ ಲೋಕಸಭೆ ಚುನಾವಣೆ
-ಪಬ್ಲಿಕ್ ಟಿವಿ ವಿಶೇಷ
Advertisement
2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಕ್ಷಣಗಣನೆ ಶುರುವಾಗಿದೆ. ಇನ್ನು ಮುಂದಿನ 2 ತಿಂಗಳ ಅವಧಿಯಲ್ಲಿ ನಡೆಯುವ ಚುನಾವಣೆಯಲ್ಲಿ ದೆಹಲಿ ಗದ್ದುಗೆ ಏರುವವರು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಲಿದೆ. ಅದೆಲ್ಲಾ ಸರಿ. ಆದರೆ ಸ್ವತಂತ್ರ ಭಾರತದ ಮೊದಲ ಚುನಾವಣೆ (India’s First Lok Sabha Election) ಹೇಗಿತ್ತು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಈ ಕುತೂಹಲ ತಣಿಸುವ ಯತ್ನವನ್ನು ನಿಮ್ಮ ‘ಪಬ್ಲಿಕ್ ಟಿವಿ’ ಇಲ್ಲಿ ಮಾಡಿದೆ.
Advertisement
ಭಾರತದ ಮೊದಲ ಚುನಾವಣೆ!
ದೇಶದ ಮೊಟ್ಟ ಮೊದಲ ಚುನಾವಣೆ ಯಾವಾಗ, ಎಷ್ಟು ದಿನಗಳ ಅವಧಿಯಲ್ಲಿ ನಡೆಯಿತು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಂದಿನ ಚುನಾವಣೆಯಲ್ಲಿ ಗೆದ್ದವರು ಯಾರು ಎಂಬೆಲ್ಲಾ ವಿವರಗಳು ಇಲ್ಲಿವೆ. ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ
Advertisement
120 ದಿನಗಳ ಸುದೀರ್ಘ ಅವಧಿಯಲ್ಲಿ ಚುನಾವಣೆ!
ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ 1951-1952ರಲ್ಲಿ ನಡೆಯಿತು. 1951ರ ಅಕ್ಟೋಬರ್ 25ರಿಂದ 1952ರ ಫೆಬ್ರವರಿ 21ರ ನಡುವೆ 120 ದಿನ ಅಂದ್ರೆ 4 ತಿಂಗಳ ಕಾಲ ಲೋಕಸಭೆ ಚುನಾವಣೆ ನಡೆಯಿತು. ವಿಶ್ವದ ಜನಸಂಖ್ಯೆಯ 6ನೇ ಒಂದು ಭಾಗದಷ್ಟು ಜನರು ಮತ ಚಲಾವಣೆಗೆ ಹೊರಟಿದ್ದು, ವಿಶ್ವದ ಅತಿ ದೊಡ್ಡ ಚುನಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
Advertisement
1874 ಅಭ್ಯರ್ಥಿಗಳು & 53 ಪಕ್ಷಗಳು!
ದೇಶದ ಮೊದಲ ಚುನಾವಣೆಯಲ್ಲಿ 53 ಪಕ್ಷಗಳಿಂದ ಒಟ್ಟು 1874 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 53 ರಾಜಕೀಯ ಪಕ್ಷಗಳಲ್ಲಿ 14 ಪಕ್ಷಗಳು ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆ ಪಡೆದಿದ್ದವು. ಕಾಂಗ್ರೆಸ್ (Congress), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI), ಸೋಷಲಿಸ್ಟ್ ಪಾರ್ಟಿ, ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ, ಅಖಿಲ ಭಾರತೀಯ ಹಿಂದೂ ಮಹಾಸಭಾ ಮುಂತಾದ ಪಕ್ಷಗಳು ರಾಷ್ಟ್ರಮಟ್ಟದ ಪಕ್ಷಗಳೆಂದು ಮಾನ್ಯತೆ ಪಡೆದಿದ್ದವು.
ಮೊದಲ ಲೋಕಸಭೆಯಲ್ಲಿತ್ತು 489 ಸೀಟು
ಭಾರತ ದೇಶದ ಮೊದಲ ಲೋಕಸಭೆಯಲ್ಲಿ ಒಟ್ಟು 489 ಕ್ಷೇತ್ರಗಳಿದ್ದವು. 489 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 364 ಸೀಟುಗಳನ್ನು ಗೆದ್ದು ಭರ್ಜರಿ ಬಹುಮತ ಗಳಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ 45ರಷ್ಟು ವೋಟ್ ಷೇರು ಪಡೆದಿತ್ತು. ಸಿಪಿಐ ಪಕ್ಷ 16 ಸೀಟುಗಳನ್ನು ಗೆದ್ದು ಪ್ರಮುಖ ವಿಪಕ್ಷವಾಗಿತ್ತು. ಜಯಪ್ರಕಾಶ್ ನಾರಾಯಣ್ ಹಾಗೂ ರಾಮ್ ಮನೋಹರ್ ಲೋಹಿಯಾ ನಾಯಕತ್ವದ ಸೋಷಲಿಸ್ಟ್ ಪಾರ್ಟಿ 12 ಸೀಟು ಗೆದ್ದು 3ನೇ ಸ್ಥಾನ ಪಡೆಯಿತು. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ
ನೆಹರೂ ಭಾರತದ ಮೊದಲ ಪ್ರಧಾನಿ
364 ಸೀಟು ಗೆದ್ದ ಜವಾಹರ್ ಲಾಲ್ ನೆಹರೂ (Jawaharlal Nehru) ಸ್ವತಂತ್ರ ಭಾರತದಲ್ಲಿ ಜನರಿಂದ ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರರಾದರು.
1947ರ ಆಗಸ್ಟ್ 15ರಂದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ದೇಶದ ಮೊದಲ ಚುನಾವಣೆ 1951ರಲ್ಲಿ ನಡೆಯಿತು. 1947ರಿಂದ 6ನೇ ಕಿಂಗ್ ಜಾರ್ಜ್ ಆಡಳಿತದಲ್ಲಿ ಲೂಯಿಸ್ ಮೌಂಟ್ ಬ್ಯಾಟನ್ ಭಾರತದ ಮೊತ್ತಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ಚಲಾಯಿಸುತ್ತಿದ್ದರು. 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿದ ಬಳಿಕ, ಜವಾಹರ್ ಲಾಲ್ ನೆಹರೂ ನೇತೃತ್ವದ ಸಂವಿಧಾನ ಸಭೆಯು ಮೊದಲ ಚುನಾಯಿತ ಸರ್ಕಾರ ಅಧಿಕಾರ ಸ್ವೀಕರಿಸುವ ಮುನ್ನ ಸಂಸತ್ತಿನಂತೆ ಕಾರ್ಯನಿರ್ವಹಿಸುತ್ತಿತ್ತು. ನೆಹರೂ ಅವರ ಈ ಮಧ್ಯಂತರ ಕ್ಯಾಬಿನೆಟ್‌ನಲ್ಲಿ ವಿವಿಧ ಸಮುದಾಯಗಳು ಮತ್ತು ಪಕ್ಷಗಳ 15 ಸದಸ್ಯರಿದ್ದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಆರ್ಟಿಕಲ್ 370 ಸಹವಾಸ ಬೇಡ: ಕಾಂಗ್ರೆಸ್‍ಗೆ ಅಮಿತ್ ಶಾ ಎಚ್ಚರಿಕೆ
1948ರ ಜುಲೈನಲ್ಲೇ ಚುನಾವಣೆ ನಡೆಸಲು ರಾಷ್ಟ್ರಮಟ್ಟದ ನಾಯಕರು ಸಿದ್ಧರಿದ್ದರೂ ಚುನಾವಣೆ ನಡೆಸುವುದು ಹೇಗೆ ಎಂಬ ಕಾನೂನು ಅಂದು ರೂಪುಗೊಂಡಿರಲಿಲ್ಲ. ಅಂಬೇಡ್ಕರ್ ಅವರ ನೇತೃತ್ವದಲ್ಲಿ 1950ರ ಜನವರಿ 26ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂತು.
ಸುಕುಮಾರ್ ಸೇನ್ ಭಾರತದ ಮೊದಲ ಚುನಾವಣಾ ಆಯುಕ್ತ
ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಬಳಿಕ ದೇಶದಲ್ಲಿ ಚುನಾವಣಾ ಆಯೋಗ ರಚನೆಯಾಯಿತು. ದೇಶದಲ್ಲಿ ಮೊದಲ ಚುನಾವಣೆ ನಡೆಸುವ ಮಹತ್ವದ ಜವಾಬ್ದಾರಿ ಸುಕುಮಾರ್ ಸೇನ್ ಅವರ ಮೇಲೆ ಬಿತ್ತು. ಸುಕುಮಾರ್ ಸೇನ್ ಅವರೇ ದೇಶದ ಮೊಟ್ಟಮೊದಲ ಚುನಾವಣಾ ಆಯುಕ್ತರಾಗಿದ್ದರು.
ಚುನಾವಣೆಗೆ ಸಿದ್ಧವಾಗಲು ಬೇಕಾಯಿತು 3 ವರ್ಷ
ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚುನಾವಣೆ ನಡೆಸಬೇಕು ಎನ್ನುವುದು ಜವಾಹರ್ ಲಾಲ್ ನೆಹರೂ ಅವರ ಉದ್ದೇಶವಾಗಿತ್ತು. ಪ್ರಜಾಪ್ರಭುತ್ವದ ಸವಿಯುಣ್ಣಲು ಭಾರತ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಮೂರು ವರ್ಷಗಳ ಕಾಲ ಕಾಯಬೇಕಾಯಿತು. ಆದರೆ ಭಾರತದಂತಹ ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ದೊಡ್ಡ ಮಟ್ಟದ ಚುನಾವಣೆ ನಡೆಸುವುದು ಅಂದುಕೊಂಡಷ್ಟು ಸರಳವಾಗಿರಲಿಲ್ಲ. ಹೀಗಾಗಿ ಸಂವಿಧಾನ ಜಾರಿಗೆ ಬಂದರೂ ದೇಶ ಮೊದಲ ಚುನಾವಣೆ ನೋಡಲು 3 ವರ್ಷ ಕಾಯಬೇಕಾಯಿತು. ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ
ಸವಾಲುಗಳೇ ಅಧಿಕ
ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆಯುವ ವೇಳೆ ಭಾರತದ ಜನಸಂಖ್ಯೆ 36 ಕೋಟಿ ಇತ್ತು. ಸಂವಿಧಾನವನ್ನು ಜಾರಿಗೊಳಿಸಿದಾಗ ಸಾರ್ವತ್ರಿಕ ಮತದಾನದ ವಯಸ್ಸನ್ನು 21 ಎಂದು ನಿಗದಿಗೊಳಿಸಿತು. ಇದರ ಫಲವಾಗಿ ದೇಶದ 17 ಕೋಟಿ ಜನರು ಮತದಾನ ಮಾಡಲು ಅರ್ಹತೆ ಪಡೆದರು.
ಅದರಲ್ಲೂ, ಅರ್ಹ 17 ಕೋಟಿ ಜನರಲ್ಲಿ ಶೇ.85ರಷ್ಟು ಜನರಿಗೆ ಓದಲು ಅಥವಾ ಬರೆಯಲು ಬರುತ್ತಿರಲಿಲ್ಲ. ಹಾಗಾಗಿ ಮತದಾರರ ಗುರುತಿಸುವಿಕೆ, ಹೆಸರು ಸೇರಿಸುವುದು ಮತ್ತು ಮತದಾರನಾಗಿ ನೋಂದಣಿ ಮಾಡಿಸುವುದು ಸವಾಲಿನ ಕೆಲಸವೇ ಆಗಿತ್ತು.
ಜನಗಣತಿ ಆಧಾರದಲ್ಲಿ ಕ್ಷೇತ್ರ ವಿಂಗಡಣೆ
ದೇಶದ ಜನಗಣತಿ ಆಧಾರದಲ್ಲಿ ಲೋಕಸಭಾ ಕ್ಷೇತ್ರವನ್ನು ವಿಂಗಡಿಸಬೇಕಾಗಿತ್ತು. ಈ ವಿಂಗಡಣೆಯನ್ನು 1951ರಲ್ಲಿ ಮಾಡಲಾಯಿತು. ದೇಶದ ಅನಕ್ಷರಸ್ಥ ಜನರಿಗೆ ಅರ್ಥ ಮಾಡಿಸಲು ಪಕ್ಷಗಳ ಚಿಹ್ನೆ, ಬ್ಯಾಲಟ್ ಪೇಪರ್ ಹಾಗೂ ಬ್ಯಾಲಟ್ ಬಾಕ್ಸ್ ಅಥವಾ ಮತ ಪೆಟ್ಟಿಗೆ ವಿನ್ಯಾಸಗೊಳಿಸಬೇಕಾದ ಸಮಸ್ಯೆಗಳು ಇದ್ದವು. ಮತದಾನಕ್ಕಾಗಿ ಮತಗಟ್ಟೆ ನಿರ್ಮಾಣ ಮಾಡಬೇಕಿತ್ತು. ದಕ್ಷ ಅಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಚುನಾವಣಾ ತರಬೇತಿ ನೀಡಬೇಕಿತ್ತು.
ಆಹಾರದ ಕೊರತೆಯೂ ಇತ್ತು!
ಮತದಾನದ ಈ ಎಲ್ಲ ಸವಾಲುಗಳ ನಡುವೆ ಅಂದು ಭಾರತದ ಹಲವು ರಾಜ್ಯಗಳಲ್ಲಿ ಆಹಾರದ ಕೊರತೆ ಇತ್ತು. ಹಾಗಾಗಿ ಅಧಿಕಾರಿಗಳು ಪರಿಹಾರ ಕಾರ್ಯದಲ್ಲೂ ಭಾಗಿಯಾಗಬೇಕಿತ್ತು. ಈ ಎಲ್ಲ ಕೆಲಸಗಳು ಮುಗಿಯಲು ಭಾರೀ ಸಮಯ ಬೇಕಾಯಿತು. ಆದರೆ ಕೊನೆಯಲ್ಲಿ ಭಾರತದ ಚುನಾವಣೆ ನಡೆದಾಗ ಶೇ.45.70ರಷ್ಟು ಜನರು ತಮ್ಮ ಮನೆಯಿಂದ ಹೊರಬಂದು ಅದೇ ಮೊದಲ ಬಾರಿಗೆ ಮತ ಚಲಾಯಿಸಿದರು. ಈ ಮೂಲಕ ಭಾರತ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಆಯ್ಕೆಯಾದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಮೊದಲ ಚುನಾವಣೆಯ ಫಲಿತಾಂಶ 1952ರ ಫೆಬ್ರವರಿ 10ರಂದು ಪ್ರಕಟವಾಯಿತು.