ಕೋಲಾರ: ರಾಜ್ಯದಲ್ಲಿ ನಗರಸಭೆ, ಪರಸಭೆ ಹಾಗೂ ಪಟ್ಟಣ ಪಂಚಾಯ್ತಿ ಮತ ಎಣಿಕೆ ನಡೆದಿದ್ದು, ಕೋಲಾರದ ಮಾಲೂರು ಪುರಸಭೆ ಚುನಾವಣೆಯಲ್ಲಿ ಯುವತಿ ಗೆಲುವು ಸಾಧಿಸಿದ್ದಾರೆ.
ಸುಮಿತ್ರ ಬಿಜೆಪಿ ಅಭ್ಯರ್ಥಿಯಾಗಿದ್ದು, ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಸುಮಿತ್ರ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ 373 ಮತಗಳನ್ನ ಪಡೆದು ಜಯಶಾಲಿಯಾಗಿದ್ದಾರೆ. ಈಕೆ ಮಾಲೂರು ಪಟ್ಟಣದ ವಾರ್ಡ್ ನಂಬರ್ 27 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
Advertisement
Advertisement
Advertisement
ಲೋಕ ಸಮರ ನಂತರ ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ಪುರಸಭೆಯಲ್ಲಿ ಲೋಕಲ್ ಫೈಟ್ ನಡೆದಿದೆ. ಮಾಲೂರಿನಲ್ಲಿ ಒಟ್ಟು 27 ವಾರ್ಡ್ ಗಳಲ್ಲಿ 79 ಜನ ಕಣದಲ್ಲಿದ್ದರು. ಬಂಗಾರಪೇಟೆಯಲ್ಲಿ ಒಟ್ಟು 27 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 80 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಇತ್ತ ಶ್ರೀನಿವಾಸಪುರದಲ್ಲಿ ಒಟ್ಟು 23 ವಾರ್ಡ್‍ಗಳಿಗೆ ಚುನಾವಣೆ ನಡೆದಿದ್ದು, 87 ಜನ ಅಭ್ಯರ್ಥಿಗಳು ಕಣದಲ್ಲಿದ್ದರು.
Advertisement
ಕಳೆದ ಬಾರಿ ಮಾಲೂರಿನಲ್ಲಿ ಬಿಜೆಪಿ, ಬಂಗಾರಪೇಟೆಯಲ್ಲಿ ಕಾಂಗ್ರೆಸ್, ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಮಾಲೂರು 27 ವಾರ್ಡ್ ಗಳಲ್ಲಿ 30,125 ಮತದಾರರು ಮತದಾನ ಮಾಡಿದ್ದು, ಬಂಗಾರಪೇಟೆ 27 ವಾರ್ಡ್‍ಗಳಲ್ಲಿ ಒಟ್ಟು-80 ಅಭ್ಯರ್ಥಿಗಳು ಕಣದಲ್ಲಿದ್ದರು. ಇಲ್ಲಿ 36,773 ಮತದಾರರು ಮತದಾನ ಮಾಡಿದ್ದಾರೆ. ಶ್ರೀನಿವಾಸಪುರ 23 ವಾರ್ಡ್ ಗಳಲ್ಲಿ ಒಟ್ಟು – 87 ಅಭ್ಯರ್ಥಿಗಳು ಕಣದಲ್ಲಿದ್ದು, 20,164 ಮತದಾರರು ಮತ ಚಲಾಯಿಸಿದ್ದಾರೆ.