ಬ್ಯಾಂಕಾಕ್: ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಅಂತಾರೆ. ಅದೇ ರೀತಿ ಇಲ್ಲೊಬ್ಬ 19 ವರ್ಷದ ಹುಡುಗ (Boy) 56 ವರ್ಷದ ವೃದ್ಧೆ (Old Woman) ಜೊತೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾನೆ.
ವುತಿಚೈ ಚಂತರಾಜ್ (19) 10 ವರ್ಷವಿದ್ದಾಗ ಜನ್ಲಾ ನಮುಂಗ್ರಾಕ್ (56) ಎಂಬಾಕೆಯನ್ನು ಭೇಟಿಯಾಗಿದ್ದ. ಅವರಿಬ್ಬರು ವುತಿಚೈ ಈಶಾನ್ಯ ಥೈಲ್ಯಾಂಡ್‍ನ (Thailand) ಸಖೋನ್ ನಖೋನ್ ಪ್ರಾಂತ್ಯದಲ್ಲಿ ಜನಲಾದಲ್ಲಿ ನೆರೆಹೊರೆಯವರಾಗಿದ್ದರು.
ನಮುಂಗ್ರಾಕ್ ಮನೆ ಸ್ವಚ್ಛಗೊಳಿಸಲು ಚಂತರಾಜ್‍ನ ಬಳಿ ಸಹಾಯವನ್ನು ಕೇಳಿದ್ದಳು. ಹೀಗೆ ಕೆಲಸ ಮಾಡುತ್ತಾ ಮಾಡುತ್ತಾ ಇಬ್ಬರು ಪರಸ್ಪರ ಸ್ನೇಹಿತರಾದರು. ಅದಾದ ಬಳಿಕ ಇವರಿಬ್ಬರ ಮಧ್ಯೆ ಪ್ರೀತಿ ಆರಂಭವಾಗಿತ್ತು. ಅಷ್ಟೇ ಅಲ್ಲದೇ ಕಳೆದ 2 ವರ್ಷಗಳಿಂದ ನಮುಂಗ್ರಾಕ್ ಹಾಗೂ ಚಂತ್‍ರಾಜ್ ಒಟ್ಟಿಗೆ ವಾಸಿಸುತ್ತಿದ್ದಾರೆ.
ನಮುಂಗ್ರಾಕ್ ವಿಚ್ಛೇದಿತೆ ಆಗಿದ್ದು, ಆಕೆಗೆ ಈಗಾಗಲೇ ಮೂವತ್ತರ ಹರೆಯದ ಮೂವರು ಮಕ್ಕಳಿದ್ದಾರೆ. ಆದರೂ ಈ ಇಬ್ಬರ ಮಧ್ಯೆ ಯಾವಾಗಲೂ ವಯಸ್ಸಿನ ಅಂತರ ಬಂದಿಲ್ಲ. ಅಷ್ಟೇ ಅಲ್ಲದೇ ಡೇಟಿಂಗ್‍ಗೆ ಹೋದಾಗ ಅಥವಾ ಊರಿನಲ್ಲಿ ಓಡಾಡುವಾಗ ಇಬ್ಬರು ಯಾವುದೇ ಮುಜುಗರವಿಲ್ಲದೇ ಕೈ ಕೈ ಹಿಡಿದು ಒಟ್ಟಿಗೆ ಹೋಗುತ್ತಾರೆ.
ಈ ಬಗ್ಗೆ ನಮುಂಗ್ರಾಕ್ ಮಾತನಾಡಿ, ವುತಿಚೈ ನನಗೆ ಸೂಪರ್ ಹೀರೋ ಇದ್ದಂತೆ. ಪ್ರತಿದಿನ ನನಗೆ ಆತ ಎಲ್ಲಾ ಕೆಲಸದಲ್ಲೂ ಸಹಾಯ ಮಾಡುತ್ತಾನೆ. ನಾನು ಆತನನ್ನು ಚಿಕ್ಕದಿನಿಂದಲೂ ನೋಡುತ್ತಾ ಬಂದಿದ್ದೇನೆ. ಅವನು ದೊಡ್ಡವನಾಗುತ್ತಾ ನಮಗಿಬ್ಬರಿಗೂ ಪರಸ್ಪರ ಭಾವನೆಗಳು ಬೆಳೆಯಲು ಪ್ರಾರಂಭವಾಯಿತು. ಅಷ್ಟೇ ಅಲ್ಲದೇ ಆತನಿಂದ ಮತ್ತೆ ಯೌವನ ಅನುಭವಿಸುವಂತೆ ಆಗಿದೆ. ಸದ್ಯದಲ್ಲೇ ಮದುವೆ ಆಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 80 ವರ್ಷ ಆದ್ಮೇಲೆ ಖರ್ಗೆ ಅವರನ್ನ ಡ್ರೈವರ್ ಸೀಟಲ್ಲಿ ಕೂರಿಸಿದ್ದಾರೆ: ಅಶೋಕ್ ಲೇವಡಿ
ವುತಿಚೈ ಚಂತರಾಜ್ ಮಾತನಾಡಿ, ನಾನು ಈಗ 2 ವರ್ಷಗಳಿಂದ ಜನಲಾ ಜೊತೆ ಇದ್ದೇನೆ. ನನ್ನ ಜೀವನದಲ್ಲಿ ಇದು ಮೊದಲ ಬಾರಿಗೆ ಆರಾಮವಾಗಿ ಬದುಕುತ್ತಿದ್ದೇನೆ. ನಮುಂಗ್ರಾಕ್‍ನ ಕಷ್ಟದ ಪರಿಸ್ಥಿತಿಯನ್ನು ನೋಡಿದ್ದೇನೆ ಜೊತೆಗೆ ಉತ್ತಮ ಪರಿಸ್ಥಿತಿಯನ್ನು ನೋಡಿದ್ದೇನೆ. ಆಕೆ ಪ್ರಾಮಾಣಿಕಳು. ಇದರಿಂದ ನಾನು ಆಕೆಯನ್ನು ಪ್ರೀತಿಸುತ್ತೇನೆ ಎಂದನು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ ಆತ್ಮಹತ್ಯಾ ದಾಳಿಯೆಂದು ಪರಿಗಣಿಸಿ NIA ತನಿಖೆಗೆ ವಹಿಸಿ – ಅಣ್ಣಾಮಲೈ