ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಬಂಡಾಯ ತಣ್ಣಗಾಗಿಲ್ಲ. ಮೊದಲ ಸುತ್ತಿನಲ್ಲಿ ಸಚಿವ ಸ್ಥಾನ ಸಿಗದೆ ಇರೋದಕ್ಕೆ ಬೆಂಕಿಯಂತಾಗಿರೋ ಎಂ.ಬಿ.ಪಾಟೀಲ್ ಇಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ಉಪಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಡಿಕೆಶಿ, ಜಾರ್ಜ್, ದೇಶಪಾಂಡೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತ ಮಹದೇವಪ್ಪ ಅವರು ಮನವೊಲಿಕೆ ಯತ್ನ ಮಾಡಿದ್ರು. ಸದಾಶಿವನಗರದ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ರು. ಚರ್ಚೆ ವೇಳೇ ನಾನು ಒಬ್ಬಂಟಿ ಅಲ್ಲ, ನನ್ನ ಜೊತೆಗೆ 20 ಮಂದಿ ಶಾಸಕರಿದ್ದಾರೆ. ನಾವು ಸಭೆ ನಡೆಸೋಕೆ ಯಾರ ಅಪ್ಪಣೆಯೂ ಬೇಕಿಲ್ಲ ಅಂತ ಪಾಟೀಲರು ಗುಡುಗಿದ್ದಾರೆ ಅಂತ ತಿಳಿದು ಬಂತು.
Advertisement
ರಾಜಿ ಸಂಧಾನ ವಿಫಲವಾದ ಕಾರಣ ದೆಹಲಿಗೆ ಬರುವಂತೆ ಪಾಟೀಲರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಮತ್ತೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರು ಒಂದು ಹೆಜ್ಜೆ ಮುಂದೋಗಿ, ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಇನ್ನೆರಡು ದಿನಗಳಲ್ಲಿ ರಾಜೀನಾಮೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ತಮಗೆ ಸಚಿವ ಸ್ಥಾನ ತಪ್ಪಲು ಯಾರು ಕಾರಣ ಅಂತ ಕೂಡ ಬಹಿರಂಗ ಪಡಿಸ್ತೇನೆ ಅಂತ ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ: ನನ್ನ ಹಿರಿತನ, ನಿಷ್ಠೆಗೆ ಬೆಲೆ ಇಲ್ಲವಾ – ಪರಮೇಶ್ವರ್ ಗೆ ಎಂ.ಬಿ ಪಾಟೀಲ್ ಪ್ರಶ್ನೆಗಳ ಸುರಿಮಳೆ
Advertisement
ಎಂ.ಬಿ. ಪಾಟೀಲರೇ ಹೇಳುವಂತೆ ಅವರ ಬಳಿ 15ರಿಂದ 20 ಶಾಸಕರ ಬೆಂಬಲ ಇದೆ ಅಂದಿದ್ದಾರೆ. ಹಾಗಾದ್ರೆ, ಅಷ್ಟು ದೊಡ್ಡ ಸಂಖ್ಯೆಯಲ್ಲಿ ಅವರ ಜೊತೆಗೆ ಇರೋ ಶಾಸಕರು ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದ್ದು, ಆ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
Advertisement
ಎಂಬಿಪಿ ಬಣ್ಣದಲ್ಲಿರೋ ಶಾಸಕರು:
* ಎಚ್.ಕೆ.ಪಾಟೀಲ್, ಗದಗ
* ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್
* ಸತೀಶ್ ಜಾರಕಿಹೊಳಿ, ಯಮಕನಮರಡಿ
Advertisement
* ಹ್ಯಾರಿಸ್, ಶಾಂತಿನಗರ
* ರೋಷನ್ ಬೇಗ್, ಶಿವಾಜಿನಗರ
* ಬಿ.ಸಿ.ಪಾಟೀಲ್, ಹಿರೇಕೆರೂರು
* ಎಂಟಿಬಿ ನಾಗರಾಜ್, ಹೊಸಕೋಟೆ
* ಡಾ. ಸುಧಾಕರ್, ಚಿಕ್ಕಬಳ್ಳಾಪುರ
* ತನ್ವೀರ್ ಸೇಠ್, ನರಸಿಂಹರಾಜ
* ಎಚ್.ಎಂ.ರೇವಣ್ಣ, ಎಂಎಲ್‍ಸಿ
* ಸಿ.ಎಸ್.ಶಿವಳ್ಳಿ, ಕುಂದಗೋಳ
* ಸಂಗಮೇಶ್, ಭದ್ರಾವತಿ
* ಈಶ್ವರ್ ಖಂಡ್ರೆ, ಭಾಲ್ಕಿ
* ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾ.
* ರಹೀಂ ಖಾನ್, ಬೀದರ್
* ನಾರಾಯಣ ರಾವ್, ಬಸವ ಕಲ್ಯಾಣ
* ರಘುಮೂರ್ತಿ, ಚಳ್ಳಕೆರೆ
* ಬಿ.ನಾಗೇಂದ್ರ, ಬಳ್ಳಾರಿ ಗ್ರಾ.
* ತುಕಾರಾಂ, ಸಂಡೂರು