ಮೆಕ್ಸಿಕೋ ಸಿಟಿ: ಸೆಂಟ್ರಲ್ ಮೆಕ್ಸಿಕೋದಲ್ಲಿ ಭಾನುವಾರ ಹತ್ತೊಂಬತ್ತು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಟೇಟ್ ಅಟಾರ್ನಿ ಜನರಲ್ ಕಚೇರಿ (ಎಫ್‌ಜಿಇ) ಸೋಮವಾರ ತಿಳಿಸಿದೆ.
ಗುಂಡಿನ ದಾಳಿಗೆ ಸಾವನ್ನಪ್ಪಿದ 19 ಜನರ ಪೈಕಿ ಮೂವರು ಮಹಿಳೆಯರಿದ್ದು, ಹಲವರು ಗಾಯಗೊಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
Advertisement
ಶೂಟೌಟ್‌ಗೆ ನಿಖರ ಕಾರಣವನ್ನು ಅಧಿಕಾರಿಗಳು ತಿಳಿಸಿಲ್ಲ. ಮೈಕೋಕಾನ್ ರಾಜ್ಯದ ಲಾಸ್ ಟಿನಾಜಾಸ್ ಪಟ್ಟಣದಲ್ಲಿ ಹಬ್ಬದ ಸಂದರ್ಭ ಅಕ್ರಮ ಕೋಳಿ ಅಂಕಗಳಂತಹ ಬೆಟ್ಟಿಂಗ್ ದಂಧೆಗಳನ್ನು ಜನರು ನಡೆಸುತ್ತಾರೆ. ಇದೇ ರೀತಿ ಜೂಜಿನಲ್ಲಿ ತೊಡಗಿಕೊಂಡವರನ್ನು ಸೆರೆಹಿಡಿಯುವ ಸಲುವಾಗಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮೈಕೋಕಾನ್‌ನ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ಕಚೇರಿ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ವುಹಾನ್ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್
Advertisement
Advertisement
ಮೆಕ್ಸಿಕೋದ ಮೈಕೋವಾಕನ್ ಹಾಗೂ ಹತ್ತಿರದ ಗುವಾನಾಜುವಾಟೋ ಅತ್ಯಂತ ಹಿಂಸಾತ್ಮಕ ರಾಜ್ಯಗಳು ಎಂದೇ ಕರೆಯಲಾಗುತ್ತದೆ. ಇಲ್ಲಿ ಮಾದಕವಸ್ತು, ಕಳ್ಳಸಾಗಣೆ, ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಜಾರಿಯಾಗುತ್ತಾ ಯುಪಿ ಮಾದರಿ ಜನಸಂಖ್ಯಾ ನಿಯಂತ್ರಣ ಕಾನೂನು?
Advertisement
ಕಳೆದ ತಿಂಗಳು ಕೂಡಾ ರಾಜ್ಯದಲ್ಲಿ ಶಸ್ತ್ರಾಸ್ತ್ರ ದಾಳಿ ನಡೆದಿದ್ದು, ಪರಿಣಾಮ 17 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.