ಉಪವಾಸ ಅಂತ್ಯಗೊಳಿಸಿ ಪಾನಿಪುರಿ ತಿಂದ 19 ಮಕ್ಕಳು ಅಸ್ವಸ್ಥ – ನಾಲ್ವರ ಸ್ಥಿತಿ ಚಿಂತಾಜನಕ

Public TV
1 Min Read
Davangere Panipuri Childrens fell Unconscious

ದಾವಣಗೆರೆ: ಪಾನಿಪುರಿ (Panipuri) ತಿಂದು 19 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ನಡೆದಿದೆ.

ಮಲೆಬೆನ್ನೂರಿನ ಜಾಮಿಯಾ ಮಸೀದಿ ಬಳಿ ಘಟನೆ ನಡೆದಿದ್ದು, ಉಪವಾಸ (Fasting) ಅಂತ್ಯ ಮಾಡಿದ ನಂತರ ಮಸೀದಿ (Mosque) ಮುಂಭಾಗ ಮಾರಾಟ ಮಾಡುತ್ತಿದ್ದ ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಪಾನಿಪುರಿ ತಿಂದು ಕೆಲವೇ ಹೊತ್ತಿನಲ್ಲಿ ವಾಂತಿಯಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಪೋಷಕರು ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಅರೆಸ್ಟ್‌

19 ಮಕ್ಕಳ ಪೈಕಿ 4 ಮಕ್ಕಳ ಆರೋಗ್ಯ ಚಿಂತಾಜನಕವಾಗಿದೆ. ಇವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರುಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಭಾನುವಾರವೂ ತೆರೆಯಲಿದೆ ಉಪನೋಂದಣಿ ಕಚೇರಿ

Share This Article