ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸದ್ದಿಲ್ಲದೇ ಅವರ ಹೊಸ ಸಿನಿಮಾದ ಶೂಟಿಂಗ್ ಅನ್ನು ಮುಗಿಸಿದ್ದಾರೆ. ಬಿಡುವಿಲ್ಲದೇ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಅವರ ತಂಡ ದಾಖಲೆ ಅನ್ನುವಂತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 19.20.21 ಅನ್ನುವ ಕುತೂಹಲದ ಶೀರ್ಷಿಕೆ ಹೊತ್ತು ಈ ಸಿನಿಮಾ ಬರುತ್ತಿದೆ. ಇದನ್ನೂ ಓದಿ : ‘ಮುದುಕನ ಲವ್ ಸ್ಟೋರಿ’ಗೆ ಕೆಜಿಎಫ್ ತಾತ ಕೃಷ್ಣರಾವ್ ಹೀರೋ
Advertisement
ಈ ಸಿನಿಮಾ ಕುರಿತು ನಿರ್ದೇಶಕ ಮಂಸೋರೆ ಮಾತನಾಡಿ, “ಎರಡು ತಿಂಗಳ ಅವಧಿ, ಸತತ 51 ದಿನಗಳ ಚಿತ್ರೀಕರಣ, ಬಿಸಿಲು, ಚಳಿ, ಮಳೆ, ಹಗಲು-ರಾತ್ರಿ ಚಿತ್ರೀಕರಣ, ನೂರಕ್ಕೂ ಹೆಚ್ಚು ದೊಡ್ಡ-ಚಿಕ್ಕ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಲಾವಿದರ ದಂಡು, ಓಡಾಟ-ಹಾರಾಟ, ಕಾಡು, ಗುಡ್ಡ, ನಾಡು, ನದಿ, ಬಯಲು, ಧುತ್ತನೆ ಎದುರಾಗುವ ಹವಾಮಾನದ ವೈಪರೀತ್ಯಗಳ ನಡುವೆ, ನಾವು ಹೇಳಬೇಕೆಂದು ಬಯಸಿದ, ಈ ನೆಲದ ಕತೆಯೊಂದನ್ನು ಸಿನೆಮಾ ಮಾಡಬೇಕೆನ್ನುವ ನಮ್ಮಾಸೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಲು ಹರ್ಷವಾಗುತ್ತಿದೆ” ಎಂದಿದ್ದಾರೆ. ಇದನ್ನೂ ಓದಿ : ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ
Advertisement
Advertisement
ಮುಂದುವರೆದು ಮಾತನಾಡಿದ ಅವರು, “ಸಿನೆಮಾದ ಚಿತ್ರೀಕರಣ ಪೂರ್ತಿಯಾಗಿದೆ. ಇದನ್ನು ಸಾಧ್ಯವಾಗಿಸಿದ ನನ್ನೆಲ್ಲಾ ತಂಡದ ಸದಸ್ಯರಿಗೆ ಹಾಗೂ ಚಿತ್ರೀಕರಣ ನಡೆಸಿದ ಪ್ರತೀ ಊರಿನಲ್ಲೂ ಸಹಕರಿಸಿದ, ಸಹಾಯ ಮಾಡಿದ ಸ್ನೇಹಿತರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಚಿತ್ರೀಕರಣ ಯಶಸ್ವಿಯಾಗಿ ಪೂರ್ತಿಗೊಳ್ಳಲು ಶ್ರಮಿಸಿದ ನನ್ನೆಲ್ಲಾ ನಿರ್ದೇಶನ ವಿಭಾಗದ ಸದಸ್ಯರಿಗೂ ಧನ್ಯವಾದಗಳು” ಎಂದಿದ್ದಾರೆ. ಇದನ್ನೂ ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್
Advertisement
ಇಂತಹ ಒಂದು ಕತೆಯನ್ನು ಸಿನೆಮಾ ಮಾಡಲು ಮಂಸೋರೆ ಅವರಿಗೆ ಬೆನ್ನೆಲುಬಾಗಿ ನಿಂತವರು ನಿರ್ಮಾಪಕರಾದ ಆರ್.ದೇವರಾಜ್. ಸತ್ಯ ಹೆಗಡೆ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ವೀರೇಂದ್ರ ಮಲ್ಲಣ್ಣ, ಸಂತೋಷ್ ಟೆಮ್ಕರ್ ಸೇರಿದಂತೆ ಹಲವರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.