ಜೈಪುರ: ನಿಂತಿದ್ದ ಟ್ರೇಲರ್‌ಗೆ ಪ್ರವಾಸಿ ಬಸ್ ಡಿಕ್ಕಿ (Tourist Bus Collides) ಹೊಡೆದು ಕನಿಷ್ಠ 18 ಭಕ್ತರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆಂದು ಪೊಲೀಸರು (Rajasthan Police) ತಿಳಿಸಿದ್ದಾರೆ.
ಬಿಕಾನೇರ್‌ನ ಕೊಲಾಯತ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತರು (Devotees) ಜೋಧ್‌ಪುರದ ಸೂರ್‌ಸಾಗರ್‌ನಿಂದ ಹಿಂದಿರುತ್ತಿದ್ದರು. ಈ ವೇಳೆ ರಾಜಧಾನಿ ಜೈಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವ ಫಲೋಡಿ (Phalodi) ಜಿಲ್ಲೆಯಲ್ಲಿ ಭೀಕರ ಅಪಘಾತ ನಡೆದಿದೆ. ಘಟನೆ ತಿಳಿದು ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಸಂತಾಪ ಸೂಚಿಸಿದ್ದಾರೆ.
ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಕುಟುಂಬಸ್ಥರಿಗೆ ಘಟನೆ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಓಂ ಪ್ರಕಾಶ್ ಪಾಸ್ವಾನ್ ತಿಳಿಸಿದ್ದಾರೆ.
ಕಳೆದ 2 ವಾರಗಳಲ್ಲಿ ರಾಜಸ್ಥಾನದಲ್ಲಿ ನಡೆದ 2ನೇ ಅತಿದೊಡ್ಡ ದುರಂತವಾಗಿದೆ. ಕಳೆದ ತಿಂಗಳು ಜೈಸಲ್ಮೈರ್‌ನಲ್ಲಿ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು 26 ಮಂದಿ ಸಜೀವ ದಹನ ಆಗಿದ್ದರು. ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದು ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿತ್ತು.


