Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 2027ರ ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಸಂಚಾರ: ಡಿಕೆಶಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 2027ರ ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಸಂಚಾರ: ಡಿಕೆಶಿ

Bengaluru City

2027ರ ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಸಂಚಾರ: ಡಿಕೆಶಿ

Public TV
Last updated: December 22, 2025 7:27 pm
Public TV
Share
3 Min Read
DK Shivakumar 11
SHARE

– ಮೆಟ್ರೋ 3ನೇ ಹಂತದ ಯೋಜನೆಯ 100 ಕಿ.ಮೀ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಮೆಟ್ರೋ ಮಾರ್ಗ ಹೆಚ್ಚಳ ಮಾಡಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. 2027ರ ಡಿಸೆಂಬರ್ ವೇಳೆಗೆ ಬೆಂಗಳೂರು ನಗರದಲ್ಲಿ 175 ಕಿ.ಮೀ ಉದ್ದದಷ್ಟು ಮೆಟ್ರೋ (Namma Metro) ಮಾರ್ಗ ಕಾರ್ಯಾರಂಭವಾಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಮೆಟ್ರೋ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ 96 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳದಿ ಮಾರ್ಗ ಚಾಲನೆ ಮಾಡಲಾಗಿದ್ದು, 24 ಕಿ.ಮೀ ಉದ್ದದ ಮೆಟ್ರೋ ಸಂಚಾರ ಆರಂಭ ಮಾಡಲಾಗಿದೆ. 1 ಲಕ್ಷ ಜನ ಈ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದು, ಈ ಮಾರ್ಗದಲ್ಲಿ 30% ದಟ್ಟಣೆ ಕಡಿಮೆಯಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಬೆಂಗಳೂರಿನ ಕೊಹ್ಲಿ ಫ್ಯಾನ್ಸ್‌ಗೆ ನಿರಾಸೆ – ಅಭಿಮಾನಿಗಳಿಲ್ಲದೇ ನಡೆಯುತ್ತಾ ವಿಜಯ್‌ ಹಜಾರೆ ಪಂದ್ಯ?

Namma Metro Greenline

ಮುಂದಿನ ವರ್ಷ (2026ರಲ್ಲಿ) 41 ಕಿ.ಮೀ ಉದ್ದದ ಮಾರ್ಗ ಕಾರ್ಯಾರಂಭ ಮಾಡಲಾಗುವುದು. 2027ರ ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ 38 ಕಿ.ಮೀ ಉದ್ದದ ಮಾರ್ಗ ಕಾರ್ಯಾರಂಭ ಮಾಡಲಾಗುವುದು. ಆ ಮೂಲಕ ಬೆಂಗಳೂರಿನಲ್ಲಿ 175 ಕಿ.ಮೀ ಉದ್ದದ ಮಾರ್ಗ ಕಾರ್ಯನಿರ್ವಹಿಸಲಿದೆ. ಇದರ ಹೊರತಾಗಿ ಮಾಗಡಿ ರಸ್ತೆಯಲ್ಲಿ ತಾವರಕೆರೆವರೆಗೆ, ಹೊಸಕೋಟೆ, ಬಿಡದಿ, ನೆಲಮಂಗಲದವರೆಗೆ ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಒಂದು ಕಡೆ ಯೋಜನೆ ಕೈಗೆತ್ತಿಕೊಂಡಿದ್ದು, ಉಳಿದ ಕಡೆಗಳಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕಕ್ಕೆ ವಿಶೇಷ ಅನುದಾನ ಬಾಕಿ ಇರಿಸಿಕೊಂಡಿಲ್ಲ: ಕೇಂದ್ರ ಸ್ಪಷ್ಟನೆ

ಮುಂದಿನ ತಿಂಗಳು ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ (ಡಬಲ್ ಡೆಕ್ಕರ್) ಸೇರಿದಂತೆ ಸುಮಾರು 100 ಕಿ.ಮೀ ಉದ್ದದ ಮೆಟ್ರೋ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಸಂಚಾರ ದಟ್ಟಣೆ ನಿಯಂತ್ರಿಸಿ ಜನರ ಪ್ರಯಾಣಕ್ಕೆ ಅನುಕೂಲವಾಗಲು ಕಾಮಗಾರಿ ವೇಗವಾಗಿ ನಡೆಸುತ್ತಿದೆ. ಮೆಟ್ರೋ ನಿಲ್ದಾಣಗಳ ಬಳಿ ಹೆಚ್ಚಿನ ಜಮೀನು ಸ್ವಾಧೀನಪಡಿಸಿಕೊಂಡು ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ವಾಹನ ನಿಲುಗಡೆಗೂ ಅವಕಾಶ ಕಲ್ಪಿಸಬೇಕಿದೆ ಎಂದರು. ಇದನ್ನೂ ಓದಿ: ಕೆಂಗೇರಿ, ಹೆಜ್ಜಾಲ ರೈಲ್ವೇ ನಿಲ್ದಾಣಗಳ ಮಧ್ಯೆ ಗರ್ಡರ್‌ ಆಳವಡಿಕೆ – ಕೆಲ ರೈಲುಗಳ ಸೇವೆ ರದ್ದು

ಮೂರನೇ ಹಂತದ ಯೋಜನೆ ಟೆಂಡರ್ ಕರೆಯಲಾಗುತ್ತಿದೆ. 25,311 ಸಾವಿರ ಕೋಟಿ ವೆಚ್ಚದ ಈ ಕಾಮಗಾರಿಗೆ, ಜೈಕಾದಿಂದ 15,600 ಕೋಟಿ ರೂ. ಸಾಲ ಮಾಡಲಾಗುತ್ತಿದೆ. ಉಳಿದಂತೆ ಎಲಿವೇಟೆಡ್ ಕಾರಿಡಾರ್‌ಗೆ 9,700 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ಜನವರಿಯಲ್ಲಿ ಕರೆಯಲಾಗುವುದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ವಿವಾಹಿತನ ಜೊತೆ ಪ್ರೀತಿ, ಮದುವೆಗೆ ನಿರಾಕರಣೆ – ವಿವಾಹಿತೆ ಲೈವ್ ಸೂಸೈಡ್

NAMMA METRO 4

ಮೂರನೇ ಹಂತದಲ್ಲಿ ಸಂಪೂರ್ಣ ಮಾರ್ಗ ಎಲಿವೇಟೆಡ್ ಕಾರಿಡಾರ್ (ಡಬಲ್ ಡೆಕ್ಕರ್) ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ, ಮೂರನೇ ಹಂತದ ಯೋಜನೆಯಲ್ಲಿ ಸಂಪೂರ್ಣವಾಗಿ ಎಲ್ಲಾ ಮಾರ್ಗದಲ್ಲೂ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುವುದು. ತಾವರೆಕೆರೆ ಬಳಿ ಮೆಟ್ರೋ ನಿಲ್ದಾಣಕ್ಕೆ ಜಾಗ ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹಾಸನದಿಂದ ಬರುವ ಜನರು ಈ ಮಾರ್ಗವಾಗಿ ಬರುವುದರಿಂದ ಇಲ್ಲೂ ಡಬಲ್ ಡೆಕ್ಕರ್ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರೈಲ್ವೆ ಟಿಕೆಟ್ ದರ ಏರಿಕೆ – ಕಿ.ಮೀಗೆ ಒಂದು ಪೈಸೆ ಮಾತ್ರ ಹೆಚ್ಚಾಗಿದೆ: ಜೋಶಿ

ಟನಲ್ ರಸ್ತೆ ಟೆಂಡರ್ ಅಂತಿಮಗೊಂಡಿದ್ದು, ಅದಾನಿ ಕಂಪನಿ ಕಡಿಮೆ ಬಿಡ್ ಮಾಡಿದೆ ಎಂಬ ವರದಿಗಳು ಬಂದಿವೆ ಎಂಬ ಕುರಿತು ಪ್ರತಿಕ್ರಿಯಿಸಿ, ನನಗೆ ಇನ್ನೂ ಸಂಪೂರ್ಣ ಮಾಹಿತಿ ಬಂದಿಲ್ಲ. ನನಗೆ ಅಧಿಕೃತವಾಗಿ ಪತ್ರ ಬರುವವರೆಗೂ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ನುಡಿದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಸದ್ದಿಲ್ಲದೇ ಸಾರಿಗೆ ಮುಷ್ಕರಕ್ಕೆ ಮುಂದಾದ ಸಿಬ್ಬಂದಿ

ಸರ್ಕಾರ ನಿಗದಿ ಮಾಡಿದ ಮೊತ್ತಕ್ಕಿಂತ ಹೆಚ್ಚಿನ ಹಣ ಬಿಡ್ ಮಾಡಲಾಗಿದೆ ಎಂದು ಕುರಿತು ಮಾತನಾಡಿ, ನಾವು ಯಾರಿಗೂ ಹಣ ನೀಡುವುದಿಲ್ಲ. ಅವರೇ ಹಣ ಬಂಡವಾಳ ಹಾಕಿ ಮಾಡಬೇಕು. ವಿಜೆಎಫ್ ಎಷ್ಟು ಪರ್ಸೆಂಟ್ ನೀಡುತ್ತೇವೆ ಎಂದು ಹೇಳಿದ್ದೇವೋ ಅಷ್ಟನ್ನೇ ನೀಡುತ್ತೇವೆ. ನಾವು ಅಂದಾಜು ಮಾಡಿರುವುದರಲ್ಲಿ 40% ಮಾತ್ರ ನೀಡುತ್ತೇವೆ. ಅದರ ಮೇಲೆ ನಾವು ನೀಡುವುದಿಲ್ಲ. ಮೆಟ್ರೋಗೆ ತಗುಲುವ ವೆಚ್ಚ ಪರಿಶೀಲಿಸಿದೆ. ಬಾಂಬೆಯಲ್ಲಿ ಆಗುತ್ತಿರುವ ವೆಚ್ಚದ ಮಾಹಿತಿ ತರಿಸಿಕೊಂಡೆ. ಬಾಂಬೆಯಲ್ಲಿ ಪ್ರತಿ ಕಿ.ಮೀಗೆ 1,200 ಕೋಟಿ ರೂ. ಆಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಥಳೀಯವಾಗಿಯೇ ಪಕ್ಷದ ಗೊಂದಲ ಬಗೆಹರಿಸಿಕೊಳ್ಳಬೇಕು, ಖರ್ಗೆಯವರ ಹೇಳಿಕೆಗೆ ಗೌರವ ಕೊಡ್ತೇವೆ: ಪರಮೇಶ್ವರ್

TAGGED:bengaluruBMRCLcongressDK Shivakumarnamma metroಕಾಂಗ್ರೆಸ್ಡಿಕೆ ಶಿವಕುಮಾರ್ನಮ್ಮ ಮೆಟ್ರೋಬಿಎಂಆರ್‍ಸಿಎಲ್ಬೆಂಗಳೂರು
Share This Article
Facebook Whatsapp Whatsapp Telegram

Cinema news

Karunya Ram Samrudhi Ram
25 ಲಕ್ಷ ವಂಚನೆ – ತಂಗಿ ವಿರುದ್ಧವೇ ನಟಿ ಕಾರುಣ್ಯಾ ರಾಮ್‌ ದೂರು
Cinema Crime Latest Main Post Sandalwood
Kavya
BBK 12 | ಧ್ರುವಂತ್‌ ಔಟ್‌ – Top 6 ಸ್ಪರ್ಧಿಯಾಗಿ ಕಾವ್ಯ ಸೇಫ್‌
Cinema Latest Main Post TV Shows
Shri Mahadev
ಅಮೂಲ್ಯ ನಟನೆಯ ಪೀಕಬೂ ಚಿತ್ರಕ್ಕೆ ಶ್ರೀರಾಮ್ ಹೀರೋ
Cinema Latest Sandalwood Top Stories
bigg boss 1
Bigg Boss: ಇಂದು ಮಿಡ್‌ ವೀಕ್‌ ಎಲಿಮಿನೇಷನ್‌ – ಮನೆಯಿಂದ ಹೊರ ಹೋಗೋದ್ಯಾರು?
Cinema Latest Top Stories TV Shows

You Might Also Like

pm modi feeds punganur cows on makar sankranti
Latest

ಸಂಕ್ರಾಂತಿಯಂದು ವಿಶ್ವದ ಚಿಕ್ಕ ಪುಂಗನೂರು ಹಸುಗಳಿಗೆ ಹುಲ್ಲು ಹಾಕಿದ ಮೋದಿ – ಈ ತಳಿಯ ವಿಶೇಷತೆ ಏನು?

Public TV
By Public TV
44 seconds ago
Tarikere Leopard
Chikkamagaluru

ತರೀಕೆರೆ | ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Public TV
By Public TV
54 seconds ago
Ramanagara Kabbalu Lake Students Drown
Districts

ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ದುರ್ಮರಣ

Public TV
By Public TV
15 minutes ago
H D Kumaraswamy 4
Bengaluru City

ರಾಜ್ಯ ರಾಜಕೀಯಕ್ಕೆ ನಾನು ಬರುತ್ತೇನೆ: ಸಂಕ್ರಾಂತಿ ಹಬ್ಬದ ದಿನವೇ ಹೆಚ್‌ಡಿಕೆ ಘೋಷಣೆ

Public TV
By Public TV
22 minutes ago
Lawrence Bishnoi Gang
Crime

ದೆಹಲಿ | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಶಾರ್ಪ್‌ಶೂಟರ್ಸ್ ಅರೆಸ್ಟ್‌ -‌ ಓರ್ವನಿಗೆ ಗುಂಡೇಟು

Public TV
By Public TV
24 minutes ago
Sports Authority Of India Keral
Crime

ಕೇರಳ | ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ನೇಣಿಗೆ ಶರಣು

Public TV
By Public TV
48 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?