ಸೋದರಮಾವನಿಂದಲೇ ಅಪ್ರಾಪ್ತೆಯ ಅಪಹರಣ!

Public TV
1 Min Read
YDG

ಯಾದಗಿರಿ: ಶಹಾಪೂರ ತಾಲೂಕಿನ ಗೊಂದೆನೂರು ಗ್ರಾಮದಲ್ಲಿ ಸೋದರಮಾವನೇ ಅಪ್ರಾಪ್ತ ಬಾಲಕಿಯನ್ನು ಅಪಹರಣಗೈದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಕೊಂಕಲ ಗ್ರಾಮದ ನಿವಾಸಿ ಬಸವರಾಜ(45) ಬಾಲಕಿಯನ್ನು ಅಪಹರಿಸಿದ ವ್ಯಕ್ತಿ. ಗೊಂದೆನೂರು ಗ್ರಾಮದ ಜಮೀನಿನ ಮನೆಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದ ಬಸವರಾಜನಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳು ಇವೆ. ಬಾಲಕಿಯನ್ನು ಪ್ರೀತಿಯ ಜಾಲದಲ್ಲಿ ಹಾಕಿ ಅಪಹರಿಸಿಕೂಂಡು ಹೋಗಿದ್ದಾನೆ ಅಂತ ಬಾಲಕಿಯ ಪೋಷಕರ ಹೇಳಿದ್ದಾರೆ.

ಬಾಲಕಿಯು ಶಹಾಪೂರದಲ್ಲಿ ಪ್ರಥಮ ಪಿಯುಸಿ ಓದು ತ್ತಿದ್ದಳು, ಫೆಭ್ರುವರಿ 18 ರಂದು ಕಾಲೇಜಿಗೆ ಬಂದಾಗ ಶಹಾಪೂರದಿಂದಲೇ ಕಿಡ್ನಾಪ್ ಮಾಡಿಕೂಂಡು ಹೋಗಿದ್ದಾನೆ ಅಂತ ಬಾಲಕಿಯ ಪೋಷಕರು ದೂರಿದ್ದಾರೆ. ಇನ್ನು ಅಪಹರಣ ಮುನ್ನಾದಿನವೇ ನಿನ್ನನ್ನು ಇಷ್ಟಪಟ್ಟಿದೆನೆ. ನಾನೇ ಮದುವೆ ಮಾಡಿಕೂಳ್ಳುತ್ತೇನೆ ಅಂತಾ ಸೋದರಮಾವ ಬಸವರಾಜ ಬಾಲಕಿಗೆ ಹೇಳಿದ್ದಾನೆ. ಮಾರನೆ ದಿನವೆ ಬಾಲಕಿಯನ್ನು ಅಪಹರಿಸಿಕೂಂಡು ಹೋಗಿದ್ದಾನೆ. ಈ ಕುರಿತು ಬಾಲಕಿಯ ತಂದೆ ಫೆಬ್ರವರಿ 18 ರಂದು ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆರಂಭದಲ್ಲಿ ಪೊಲೀಸರು ಕಿಡ್ನಾಪ್ ಪ್ರಕರಣದ ದೂರು ದಾಖಲು ಮಾಡಿಕೂಂಡಿರಲಿಲ್ಲ. ಬಾಲಕಿಯನ್ನು ಹುಡಿಕಿ ಕೂಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಭರವಸೆ ನೀಡಿದಂತೆ ಪೊಲೀಸರು ಹುಡುಕಾಡಿದರೂ ಬಾಲಕಿ ಬಗ್ಗೆ ಸುಳಿವು ಸಿಗಲಿಲ್ಲ. ಹೀಗಾಗಿ ಮಾರ್ಚ್ 17 ರಂದು ವಡಗೇರಾ ಪೊಲಿಸರು ಕಿಡ್ನಾಪ ಪ್ರಕರಣ ದಾಖಲಿಸಿಕೂಂಡು ಆರೋಪಿ ಬಂಧನಕ್ಕೆ ವ್ಯಾಪಕವಾಗಿ ಜಾಲ ಬಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಒನ್ ಸೈಡ್ ಲವ್ ಅಥವಾ ಬಾಲಕಿಯು ಕೂಡ ಆತನನ್ನು ಪ್ರೀತಿ ಮಾಡುತ್ತಿದ್ದಾಳಾ ಎಂಬುವದು ಪೊಲೀಸರು ತನಿಖೆ ಬಳಿಕ ಗೊತ್ತಾಗಲಿದೆ.

ಮಗಳನ್ನು ಪತ್ತೆ ಹಚ್ಚಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ವಿಳಂಬವಾದ್ರೆ ಕುಟುಂಬ ಸಮೇತ ವಡಗೆರಾ ಪೊಲೀಸ್ ಠಾಣೆ ಎದರುಗಡೆ ಅಮರಣಾಂತ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಕೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *