-ಉತ್ತರಪ್ರದೇಶದ ಕುಷಿನಗರದಲ್ಲಿ ‘ಸಿಂಧೂರ’ ಖುಷಿ
ಲಕ್ನೋ: ಭಾರತೀಯ ಸೇನೆ ನಡೆಸಿದ `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯ ಯಶಸ್ಸಿನ ಹೆಮ್ಮೆಯಿಂದಾಗಿ ಉತ್ತರ ಪ್ರದೇಶದ (Uttara Pradesh) ಕುಷಿನಗರದಲ್ಲಿ 17 ನವಜಾತ ಶಿಶುಗಳಿಗೆ `ಸಿಂಧೂರ’ (Sindoor) ಎಂದು ನಾಮಕರಣ ಮಾಡಿದ್ದಾರೆ.
ಏ.22 ರಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7ರಂದು ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಅಡಿಯಲ್ಲಿ ಪಾಕ್‌ನ 9 ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು.ಇದನ್ನೂ ಓದಿ: ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ – ಸೈನಿಕರನ್ನು ಭೇಟಿಯಾದ ಮೋದಿ
ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದ ಎರಡು ದಿನಗಳ ಬಳಿಕ ಮೇ 9 ಮತ್ತು 10ರಂದು ಜನಿಸಿದ 17 ಮಕ್ಕಳಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದು, ಆಪರೇಷನ್ ಸಿಂಧೂರದ ಯಶಸ್ಸು ಭಾರತೀಯರ ಹೆಮ್ಮೆ ಎಂದು ತಿಳಿಸಿದ್ದಾರೆ.
ಈ ಕುರಿತು ನವಜಾತ ಶಿಶುವಿನ ತಾಯಿ ನೇಹಾ ಗುಪ್ತಾ ಮಾತನಾಡಿ, ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಈ ರೀತಿ ಹೆಸರಿಡುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇಲ್ಲಿ ನವಜಾತ ಶಿಶುಗಳಿಗೆ ತಂದೆಯ ಚಿಕ್ಕಮ್ಮ ಹೆಸರಿಡುತ್ತಾರೆ. ಆದರೆ ಹೆಣ್ಣುಮಕ್ಕಳ ಸಂಕೇತ ಈ `ಸಿಂಧೂರ’ ಈಗ ಒಗ್ಗಟಿನ ಸಂಕೇತವಾಗಿದೆ. ನಮ್ಮ ಸೈನಿಕರು ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಎರಡು ದಿನಗಳ ನಂತರ, ಮೇ 9 ರಂದು ನನ್ನ ಮಗು ಜನಿಸಿತು. ಮೃತ ಕುಟುಂಬಸ್ಥರ ನೋವಿನ ಬಗ್ಗೆ ನನಗೆ ಕಾಳಜಿಯಿದೆ. ಆದರೆ ಇದಕ್ಕೆ ಸೇಡು ತೀರಿಸಿಕೊಂಡ ನಮ್ಮ ಗಡಿ ಕಾಯುವ ಸೈನಿಕರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಹೀಗಾಗಿ ಅವರನ್ನು ಗೌರವಿಸುವ ಉದ್ದೇಶದಿಂದ ನನ್ನ ಮಗಳಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದೇನೆ ಎಂದು ತಿಳಿಸಿದರು.
ಕುಷಿನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಕೆ.ಶಾಹಿ ಮಾತನಾಡಿ, ಆಸ್ಪತ್ರೆಯಲ್ಲಿ ಜನಿಸಿದ 17 ಶಿಶುಗಳಿಗೆ `ಸಿಂಧೂರ’ ಎಂದು ನಾಮಕರಣ ಮಾಡಿದ್ದಾರೆ. ಇದು ಜನರು ರಾಷ್ಟ್ರದ ಮೇಲಿನ ಪ್ರೀತಿಯನ್ನು ಯಾವ ರೀತಿ ತೋರಿಸುತ್ತಾರೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ತ್ಯಾಗ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ರಾಜೇಶ್ ಮಣಿ ಮಾತನಾಡಿ, ಕುಶಿನಗರ ಮತ್ತು ಉತ್ತರ ಪ್ರದೇಶದ ಕೆಲವು ಜಿಲ್ಲೆಗಳ ಅನೇಕ ಕುಟುಂಬಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದವರಿದ್ದಾರೆ. ನನ್ನ ಮಗುವಿನ ಜನನಕ್ಕೂ ಮುಂಚೆಯೇ `ಸಿಂಧೂರ’ ಎಂಬುದು ಹೆಸರಾಗಿರಬೇಕು ಎಂದು ನಿರ್ಧರಿಸಿದ್ದೆ, ಇದು ಧೈರ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಪಾಕ್ ಶೆಲ್ ದಾಳಿ, ಯುದ್ಧದ ತೀವ್ರತೆಯ ಅನುಭವ ಬಿಚ್ಚಿಟ್ಟ ಕಾಶ್ಮೀರದಿಂದ ಮರಳಿದ ಕನ್ನಡಿಗ ವಿದ್ಯಾರ್ಥಿಗಳು