– ಗಂಡು ಹೆಬ್ಬಾವನ್ನು ಬಳಸಿ ಹೆಣ್ಣು ಹೆಬ್ಬಾವನ್ನು ಸೆರೆಹಿಡಿದ ಸಂಶೋಧಕರು
ವಾಷಿಂಗ್ಟನ್: ಸಂಶೋಧಕರ ತಂಡವೊಂದು ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಗಂಡು ಹೆಬ್ಬಾವನ್ನು ಬಳಸಿಕೊಂಡು ಬರೋಬ್ಬರಿ 73 ಮೊಟ್ಟೆ ಇಟ್ಟಿದ್ದ 17 ಉದ್ದದ ಹೆಣ್ಣು ಹೆಬ್ಬಾವನ್ನು ಸೆರೆಹಿಡಿದಿದ್ದಾರೆ.
ಫ್ಲೋರಿಡಾದ ಅರಣ್ಯ ಪ್ರದೇಶಗಳಲ್ಲಿ ಬೃಹತ್ ಗಾತ್ರದ ಹೆಬ್ಬಾವುಗಳ ವಿನಾಶಕಾರಿ ಆಕ್ರಮಣ ಹೆಚ್ಚಾಗಿದ್ದು, ಇದನ್ನು ಎದುರಿಸಲು ಸಂಶೋಧಕರ ತಂಡ ಹೊಸ ವಿಧಾನವನ್ನು ಬಳಸಿ, ಜಿಂಕೆ ಹಾಗೂ ಇತರೇ ಪ್ರಾಣಿಗಳನ್ನು ತಿನ್ನುವಷ್ಟು ದೊಡ್ಡದಾಗಿರುವ 17 ಅಡಿ ಉದ್ದದ (5.2 ಮೀಟರ್) ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಈ ಹೆಣ್ಣು ಹೆಬ್ಬಾವು ಸುಮಾರು 140 ಪೌಂಡ್ಸ್ ಅಂದರೆ 64 ಕೆಜಿ ತೂಕವಿದ್ದು, ದಕ್ಷಿಣ ಫ್ಲೋರಿಡಾದಲ್ಲಿ ಸಿಕ್ಕ ಅತ್ಯಂತ ಉದ್ದದ ಹೆಬ್ಬಾವುಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
Advertisement
https://www.facebook.com/BigCypressNPS/posts/2674386612634632
Advertisement
ಈ ಬಗ್ಗೆ `ಬಿಗ್ ಸೈಪ್ರೆಸ್ ನ್ಯಾಷನಲ್ ಪ್ರಿಸರ್ವ್’ ಎಂಬ ಫೇಸ್‍ಬುಕ್ ಖಾತೆ ಸೆರೆಹಿಡಿದಿರುವ ಹೆಬ್ಬಾವಿನ ಫೋಟೋ ಅಪ್ಲೋಡ್ ಮಾಡಲಾಗಿದೆ. ಈ ಫೋಟೋ ಸದ್ಯ ಸಖತ್ ವೈರಲ್ ಆಗಿದ್ದು, ಹೆಬ್ಬಾವನ್ನು ನೋಡಿದ ಜನ ಅಬ್ಬಾ ಎಂಥಾ ಹೆಬ್ಬಾವು ಅಂತ ಅಚ್ಚರಿ ಪಟ್ಟಿದ್ದಾರೆ.
Advertisement
ಅಲ್ಲದೆ ಹೇಗೆ ಈ ಬೃಹತ್ ಗಾತ್ರದ ಹೆಣ್ಣು ಹೆಬ್ಬಾವನ್ನು ಸೆರೆಹಿಡಿಯಲಾಯಿತು ಎನ್ನುವ ಬಗ್ಗೆ ಕೂಡ ಪೋಸ್ಟ್‍ನಲ್ಲಿ ವಿವರಿಸಲಾಗಿದೆ. ದಕ್ಷಿಣ ಫ್ಲೋರಿಡಾದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೊಲ, ಜಿಂಕೆ ಹಾಗೂ ಇತರೇ ಸಣ್ಣ ಪ್ರಾಣಿಗಳನ್ನು ಹೆಬ್ಬಾವು ಬೇಟೆಯಾಡುತಿತ್ತು. ಆದ್ದರಿಂದ ಅರಣ್ಯದಲ್ಲಿ ಸಣ್ಣ ಗಾತ್ರದ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿತ್ತು. ಇದನ್ನು ಮನಗಂಡ ಸಂಶೋಧಕರ ತಂಡ ಅರಣ್ಯ ಪ್ರದೇಶದಲ್ಲಿ ಹೊಸ ವಿಧಾನ ಬಳಿಸಿ ಹೆಬ್ಬಾವು ಹಾಗೂ ಇತರೇ ವಿಷಪೂರಿತ ಹಾವುಗಳನ್ನು ಸೆರೆಹಿಡಿದಿದ್ದಾರೆ.
Advertisement
ಗಂಡು ಹೆಬ್ಬಾವನ್ನು ಬಳಸಿಕೊಂಡು, ರೆಡಿಯೋ ಟ್ರಾನ್ಮ್ಸಿಟರ್ ಸಹಾಯದಿಂದ ಈ ಹೆಣ್ಣು ಹೆಬ್ಬಾವನ್ನು ಪತ್ತೆ ಹಚ್ಚಲಾಗಿದೆ. 2012ರಲ್ಲಿ ದಕ್ಷಿಣ ಫ್ಲೋರಿಡಾದಲ್ಲಿ ಹೆಬ್ಬಾವು ಹಾಗೂ ಇತರೇ ಹಾವುಗಳ ಆಮದು ಮಾಡುವುದನ್ನು ಬ್ಯಾನ್ ಮಾಡಿದ ಬಳಿಕ ಇಲ್ಲಿ 30 ಸಾವಿರ ಇದ್ದ ಹೆಬ್ಬಾವುಗಳ ಸಂಖ್ಯೆ 3 ಲಕ್ಷಕ್ಕೆ ಏರಿಕೆಯಾಗಿದೆ.