ನವದೆಹಲಿ: ಯುದ್ಧ ಪೀಡಿತ ಸುಡಾನ್‍ನಲ್ಲಿ (Sudan) ಸಿಲುಕಿರುವ ದೇಶದ ಪ್ರಜೆಗಳನ್ನು ರಕ್ಷಿಸಲು (Rescue) ಪ್ರಾರಂಭಿಸಲಾಗಿದ್ದ ಆಪರೇಷನ್ ಕಾವೇರಿಯನ್ನು ಭಾರತ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸೇನಾಪಡೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಸುಡಾನ್ ದೇಶವು ರಕ್ತಪಾತವನ್ನು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ವಿಮಾನವು ಶುಕ್ರವಾರ ಸುಡಾನ್‍ನಲ್ಲಿರುವ 47 ಭಾರತೀಯ ಪ್ರಜೆಗಳನ್ನು (Indians) ದೇಶಕ್ಕೆ ವಾಪಸ್ ಕರೆತರಲು ತನ್ನ ಅಂತಿಮ ಹಾರಾಟವನ್ನು ನಡೆಸುವ ಮೂಲಕ ಅಂತ್ಯಗೊಳಿಸಿದೆ. ಸುಡಾನ್‍ನಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತವು ಏ. 24ರಂದು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತ್ತು.
Advertisement
Advertisement
ಈ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿ, ಭಾರತೀಯ ವಾಯುಪಡೆಯು ಸಿ 130 ವಿಮಾನವು ಆಗಮಿಸಿದೆ. ಇದರೊಂದಿಗೆ ಆಪರೇಷನ್ ಕಾವೇರಿ ಮೂಲಕ 3,862 ಜನರನ್ನು ಸುಡಾನ್‍ನಿಂದ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದೆ.
Advertisement
ಭಾರತೀಯ ವಾಯುಪಡೆಯು 17 ವಿಮಾನಗಳನ್ನು (Air Force Flights) ಸುಡಾನ್ ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದೆ. ಭಾರತೀಯ ನೌಕಾಪಡೆಯ ಹಡಗುಗಳು ಭಾರತೀಯರನ್ನು ಸುಡಾನ್‍ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಸ್ಥಳಾಂತರಿಸಲು 5 ಹಡಗುಗಳು (Navy Ship) ಕಾರ್ಯಾಚರಣೆ ನಡೆಸಿವೆ. ಇದನ್ನೂ ಓದಿ: ರೋಡ್ ಶೋನಲ್ಲಿ ಸರ್ಕಾರದ ಸಾಧನೆ, ಬೆಂಗಳೂರು ಕೊಡುಗೆಗಳ ಉಲ್ಲೇಖದ ಫ್ಲೆಕ್ಸ್ ಅಳವಡಿಕೆ
Advertisement
ಸುಡಾನ್‍ನಿಂದ ಭಾರತೀಯರನ್ನು ರಕ್ಷಿಸಿ ಸ್ಥಳಾಂತರಿಸಲು ಸಹಾಯ ಮಾಡಿದ ಸೌದಿ ಅರೇಬಿಯಾಕ್ಕೆ ಕೃತಜ್ಞತೆ ಸಲ್ಲಿಸಿದರು. ಚಾಡ್, ಈಜಿಪ್ಟ್, ಫ್ರಾನ್ಸ್, ದಕ್ಷಿಣ ಸುಡಾನ್, ಯುಎಇ, ಯುಕೆ, ಯುಎಸ್ ಮತ್ತು ವಿಶ್ವಸಂಸ್ಥೆಯ ಬೆಂಬಲವನ್ನು ಶ್ಲಾಘಿಸಿದರು. ಇದನ್ನೂ ಓದಿ: ನಾನು ತಟಸ್ಥ, ಆದ್ರೆ ಪಕ್ಷ ವಿರೋಧಿ ಕೆಲಸ ಮಾಡಲ್ಲ : ಶಾಸಕ ಸುಕುಮಾರ ಶೆಟ್ಟಿ