ಲಂಡನ್: ಮೊಮ್ಮಗಳಿಗೆ ಉತ್ತಮ ಊಟ ಕೊಡಿಸಲು ಹೋಗಿ ತಾತ ಕಾರ್ ಪಾರ್ಕಿಂಗ್‍ನಲ್ಲಿ 17 ನಿಮಿಷ ಹೆಚ್ಚು ಸಮಯ ಕಾರ್ ಪಾರ್ಕ್ ಮಾಡಿ 2 ಲಕ್ಷರೂಪಾಯಿಯನ್ನು ಖರ್ಚು ಮಾಡಿರುವ ಘಟನೆ ಇಂಗ್ಲೆಂಡನ್‍ನಲ್ಲಿ ನಡೆದಿದೆ.
ಜಾನ್ ಬಾಬೇಜ್(75) ತನ್ನ ಮೊಮ್ಮಗನಿಗೆ ಊಟಕೊಡಿಸಲು ನಿರ್ಧರಿಸಿದ್ದಾರೆ. ಮೊಮ್ಮಗನಿಗೆ 200 ರೂಪಾಯಿ ಊಟ ಕೊಡಿಸಿ 2 ಲಕ್ಷರೂಪಾಯಿ ಪಾರ್ಕಿಂಗ್‍ಗೆ ದಂಡದ ಹಣವನ್ನು ಕಟ್ಟಿರುವುದು ಎಲ್ಲೆಡೆ ಸುದ್ದಿಯಾಗುತ್ತಿದೆ.
Advertisement
Advertisement
ಊಟ ತೆಗೆದುಕೊಂಡು ಹೋಗಲು ತಾತ ಮತ್ತು ಮೊಮ್ಮಗ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ 200 ರೂಪಾಯಿ ಕೊಟ್ಟು ಊಟವನ್ನು ಖರೀದಿ ಮಾಡಿದ್ದಾರೆ. ಇನ್ನೇನು ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಮೊಮ್ಮಗನಿಗೆ ಸ್ನೇಹಿತರು ಸಿಕ್ಕಿದ್ದಾರೆ. ಮೊಮ್ಮಗ ಆಟವಾಡಲು ಅವರೊಂದಿಗೆ ಹೋಗಿದ್ದಾನೆ. ಮೊಮ್ಮಗ ಬರುವವರೆಗೂ ಪಾರ್ಕಿಂಗ್‍ನಲ್ಲಿರುವ ಕಾರ್‍ನಲ್ಲಿ ಇರೋಣ ಎಂದು ಬಂದಿದ್ದಾರೆ. ಆದರೆ ಅಲ್ಲಯೇ ಜಾನ್ ನಿದ್ದೆಗೆ ಜಾರಿದ್ದಾರೆ.
Advertisement
Advertisement
ಮೊಮ್ಮಗ ಬರುವುದು ತಡವಾಗಿದೆ. ಆದರೆ ಪಾರ್ಕಿಂಗ್ ಸಮಯ ಕೇವಲ 2 ಗಂಟೆ ಮಾತ್ರ ಉಚಿತವಾಗಿತ್ತು. ಆ ಸಮಯವನ್ನು ಮೀರಿದರೆ ದಂಡ ಕಟ್ಟಬೇಕಿತ್ತು. ಈ ವಿಚಾರ ಜಾನ್‍ಗೆ ತಿಳಿದಿರಲಿಲ್ಲ. ಹೀಗೆ 17 ನಿಮಿಷ ಹೆಚ್ಚುವರಿಯಾಗಿ ಅಲ್ಲಿ ತನ್ನ ಕಾರ್ ಪಾರ್ಕ್ ಮಾಡಿದ್ದಾರೆ. ಇದಾದ ಮೇಲೆ ತನ್ನ ಮೊಮ್ಮಗನನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.
ಕಾರ್ ಪಾಕಿರ್ಂಗ್ ಸಂಸ್ಥೆ ಈ ಕುರಿತು ಜಾನ್ ಮನೆಗೆ ಒಂದು ನೋಟಿಸ್ ಕಳುಹಿಸಿದ್ದಾರೆ. ಆದರೆ ಅದು ಯಾವುದೋ ಒಂದು ಬೇರೆ ವಿಳಾಸಕ್ಕೆ ಹೋಗಿ ತಲುಪಿದೆ. ಹೀಗಾಗಿ ದಂಡ ಮತ್ತಷ್ಟು ಹೆಚ್ಚಾಗಿದೆ. ಕೊನೆಗೆ ಇಂಗ್ಲೆಂಡ್‍ನಲ್ಲಿನ ಸಾಲ ಸಂಗ್ರಹ ಮಾಡುವ ಸಂಸ್ಥೆ ಅಧಿಕಾರಿಗಳು ಮನೆಗೆ ಬಂದು 2 ಲಕ್ಷ ದಂಡ ಪಾವತಿಸಬೇಕು ಎಂದು ಹೇಳಿದ್ದಾರೆ. ತಾತ ಮೊಮ್ಮಗನಿಗೆ ಊಟ ಕೊಡಿಸಲು ಹೋಗಿ 2 ಲಕ್ಷ ದಂಡ ಕಟ್ಟಿ ಸುದ್ದಿಯಾಗಿದ್ದಾರೆ.