– ಕೌನ್ಸಿಲಿಂಗ್ ವೇಳೆ ಘೋರ ಕೃತ್ಯ ಬಾಯ್ಬಿಟ್ಟ ಹುಡುಗಿ
ತಿರುವನಂತಪುರಂ: 38 ಮಂದಿ 17ರ ಹುಡುಗಿಯ ಮೇಲೆ ನಿಂರಂತರವಾಗಿ ಸಾಮೂಹಿಕ ಅತ್ಯಚಾರ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಸಂತ್ರಸ್ತೆ ತಾನು ಅಪ್ರಾಪ್ತ ವಯಸ್ಸಿನಿಂದ ಅನುಭವಿಸಿರುವ ಲೈಂಗಿಕ ಕಿರುಕುಳ, ಶೋಷಣೆಯನ್ನು ನಿರ್ಭಯಾ ಕೇಂದ್ರದ ಅಧಿಕಾರಿಗಳ ಎದುರು ವಿವರಿಸಿದ್ದಾಳೆ.
2016 ರಲ್ಲಿ ಬಾಲಕಿ 13 ವರ್ಷವದವಳಿದ್ದಾಗಲೇ ಆಕೆಯ ಮೇಲೆ ಮೊದಲ ಬಾರಿಗೆ ಅತ್ಯಾಚಾರವಾಗಿದೆ. ಅದಾದ ಒಂದು ವರ್ಷದ ಬಳಿಕ ಮತ್ತೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ. 38 ಮಂದಿ ಪುರುಷರು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ನಿರ್ಭಯಾ ಸೆಂಟರ್‍ನಲ್ಲಿ ಕೌನ್ಸಿಲಿಂಗ್ ವೇಳೆ ತನ್ನ ಮೇಲಾಗಿರುವ ಅತ್ಯಾಚಾರದ ಕುರಿತಾಗಿ ಹೇಳಿಕೊಂಡಿದ್ದಾಳೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತೆ ವರ್ಷದ ಹಿಂದೆ ಬಾಲಗೃಹದಿಂದ ಬಿಡುಗಡೆಯಾದ ನಂತರ ಕೆಲಕಾಲ ಕಾಣೆಯಾಗಿದ್ದಳು. ನಂತರ ಡಿಸೆಂಬರ್‍ನಲ್ಲಿ ಪಾಲಕ್ಕಾಡ್‍ನಲ್ಲಿ ಪತ್ತೆಯಾದಳು. ಅಲ್ಲಿಂದ ನಿರ್ಭಯಾ ಕೇಂದ್ರಕ್ಕೆ ತರಲಾಯಿತ್ತು ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ಹನೀಫಾ ಅವರು ಮಾಹಿತಿ ನೀಡಿದ್ದಾರೆ.
44 ಮಂದಿಯ ಮೇಲೆ 32 ಪ್ರಕರಣಗಳನ್ನು ದಾಖಲಿಸಿ 20 ಮಂದಿಯ ಬಂಧನವನ್ನು ಮಾಡಲಾಗಿದೆ. ಬಂಧಿತರು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಅತ್ಯಾಚಾರಕ್ಕೆ ಒಳಗಾದ ಹುಡುಗಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯವಾಗಿದೆ. ಆಕೆ ಖಿನ್ನತೆಗೆ ಒಳಗಾಗಿದ್ದಳು ಹಾಗಾಗಿ ಆಕೆಗೆ ಕೌನ್ಸಿಲಿಂಗ್ ನಡೆಸಲಾಯಿತ್ತು. ಸಂತ್ರಸ್ತೆಯಿಂದ ಅಸಲಿ ಸತ್ಯ ಹೊರಬಂದಿದೆ. ಬಾಲ್ಯದಿಂದಲೇ ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿರುವುದರಿಂದ ಆಕೆ ಮನಸ್ಥಿತಿ ಹದಗೆಟ್ಟಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ತಿಳಿಸಿದ್ದಾರೆ.