ಜೈಪುರ: 16 ವರ್ಷದ ಬಾಲಕಿಯೊಬ್ಬಳು ಆರುವರೆ ತಿಂಗಳ ತನ್ನ ಭ್ರೂಣ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.
ಬಾಲಕಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಗರ್ಭಪಾತ ಮಾಡಿದರೆ ಬಾಲಕಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ? ಈ ಬಗ್ಗೆ ಅಭಿಪ್ರಾಯ ತಿಳಿಸಲು ವೈದ್ಯಕೀಯ ಮಂಡಳಿ ರೂಪಿಸಿ ಅಭಿಪ್ರಾಯ ತಿಳಿಸಿ ಎಂದು ರಾಜಸ್ಥಾನ ಸರ್ಕಾರಕ್ಕೆ ಸೂಚಿಸಿದೆ.
Advertisement
ಈ ವೈದ್ಯಕೀಯ ಮಂಡಳಿ ಸೋಮವಾರವೇ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೇಂದು ಕೋರ್ಟ್ ಸೂಚಿಸಿದೆ.
Advertisement
Advertisement
ಬಾಲಕಿ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಆಕೆಯ ಜೀವಕ್ಕೆ ಅಪಾಯವಾಗಲಿದೆ. ಹೀಗಾಗಿ ಬಾಲಕಿಗೆ ಗರ್ಭಪಾತ ಮಾಡಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯದಲ್ಲಿ ಬಾಲಕಿಯ ಪರ ವಕೀಲರಾದ ರಾಜೇಂದ್ರ ಸಿಂಗ್ ಚರಣ್ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ತಕ್ಷಣ ಬಾಲಕಿಯ ಆರೋಗ್ಯದ ಪರೀಕ್ಷೆ ಮಾಡಿ ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
Advertisement
ಏನಿದು ಪ್ರಕರಣ?
ಕೆಲವು ದಿನಗಳ ಹಿಂದೆ ಬಾಲಕಿಯ ತಂದೆ ತಮ್ಮ ಮಗಳ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರಿಗೆ ಬಾಲಕಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಬಾಲಕಿಯ ಪೋಷಕರು ಹೈ ಕೋರ್ಟ್ ನಲ್ಲಿ ಈ ಮಗಳನ್ನು ಪತ್ತೆ ಹಚ್ಚು ಕೊಡುವಂತೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ಕೂಡಲೇ ಬಾಲಕಿಯನ್ನು ಪತ್ತೆ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿತ್ತು.
ಕೋರ್ಟ್ ಆದೇಶದ ಬಳಿಕ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಆದರೆ ಈ ವೇಳೆ ಬಾಲಕಿ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಆಕೆ ಇನ್ನೂ ಅಪ್ರಾಪ್ತೆಯಾದ ಹಿನ್ನೆಲೆಯಲ್ಲಿ ನಾರಿ ನಿಕೇತನ ಸಂಸ್ಥೆಯಲ್ಲಿ ಇಡಲಾಗಿತ್ತು. ಈ ವೇಳೆ ಬಾಲಕಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಬಂದಿತ್ತು.