ಬಲವಂತವಾಗಿ ಅಪ್ರಾಪ್ತೆಯನ್ನ ಮದ್ವೆಯಾಗಿ 2 ತಿಂಗ್ಳು ಸತತ ರೇಪ್

Public TV
1 Min Read
MINOR GIRL 1

ಚಂಡೀಗಢ: ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಸತತ ಎರಡು ತಿಂಗಳು ಕಾಲ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ರಿಂಕು ಎಂದು ಗುರುತಿಸಲಾಗಿದೆ. ಈತ ಹರಿಯಾಣದಲ್ಲಿರುವ ಅಂಬಾಲಾ ನಿವಾಸಿಯಾಗಿದ್ದು, ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

marriage

ಸಂತ್ರಸ್ತೆಯ ತಾಯಿಯ ಅಜ್ಜಿ ಕಳೆದ ವರ್ಷ ಅಕ್ಟೋಬರ್ 12 ರಂದು ಆರೋಪಿ ರಿಂಕುಗೆ ಬಲವಂತವಾಗಿ ಅಪ್ರಾಪ್ತೆಯನ್ನು ಮದುವೆ ಮಾಡಿಸಿದ್ದಳು. ಬಳಿಕ ಆತನು ಅಪ್ರಾಪ್ತೆಗೆ ಕಿರುಕುಳ ನೀಡಿ ಸತತ ಎರಡು ತಿಂಗಳು ಕಾಲ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಪಟಿಯಾಲದ ನಿವಾಸಿಯಾಗಿದ್ದು, ಬಳಿಕ ಈ ಬಗ್ಗೆ ನಗರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾಳೆ.

ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡು ಆರೋಪಿಯ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಸಂತ್ರಸ್ತೆ ಕಳೆದ ವರ್ಷ ಆರೋಪಿಯ ಜೊತೆ ಮದುವೆಯಾಗಿದ್ದು, ವಿವಾಹದ ಬಳಿಕ ಆತ ಅತ್ಯಾಚಾರ ಎಸಗಿ ಪ್ರತಿದಿನ ಕಿರುಕುಳ ನೀಡುತ್ತಿರುವುದಾಗಿ ಸಂತ್ರಸ್ತೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

girl

ಸದ್ಯಕ್ಕೆ ಚಂಡೀಗಢದಲ್ಲಿ ಅಧಿಕಾರಿಗಳ ಅಧಿಕೃತ ದೂರಿನ ನಂತರ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *