ಇಂದು 16 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 443ಕ್ಕೇರಿಕೆ

Public TV
3 Min Read
Corona news

-ರೋಗಿ 419ರಿಂದ 9 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿಂದು 16 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 9 ಕೊರೊನಾ ಪ್ರಕರಣಗಳು ವರದಿಯಾಗಿವೆ. ನಿನ್ನೆ ಸಹ ಬೆಂಗಳೂರಿನ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬೆಂಗಳೂರಿನ ಹೊಂಗಸಂದ್ರದ ಬಿಹಾರ ಮೂಲಕ ಕಾರ್ಮಿಕ (ರೋಗಿ ನಂಬರ್ 419) ಸಿಲಿಕಾನ್ ಸಿಟಿಗೆ ಕಂಟಕವಾಗುತ್ತಾ ಅನ್ನೋ ಅನುಮಾನಗಳು ದಟ್ಟವಾಗಿವೆ. ಕೂಲಿ ಕಾರ್ಮಿಕನ ಸಂಪರ್ಕದಲ್ಲಿದ್ದ 9 ಜನರಿಗೆ ಕೊರೊನಾ ದೃಢಪಟ್ಟಿದೆ. ತಡರಾತ್ರಿ ಕಾರ್ಯಚರಣೆ ನಡೆಸಿದ ಆರೋಗ್ಯ ಜಲ್ಲಾಧಿಕಾರಿಗಳು 118 ಜನರನ್ನು ಕ್ವಾರಂಟೈನ್ ಮಾಡಿದ್ದಾರೆ.

ನಂಜನಗೂಡಿನ ರೋಗಿ ನಂಬರ್ 52ರಂತೆ ಬಿಹಾರ ಕಾರ್ಮಿಕ ಬೆಂಗಳೂರಿಗೆ ಕಂಟಕವಾಗುವ ಸಾಧ್ಯತೆಗಳಿವೆ. ಸೋಂಕು ತಗುಲಿದ ಬಳಿಕ ಕಾರ್ಮಿಕ ಆಟೋದಲ್ಲಿ ಹೊಂಗಸಂದ್ರದ ವೇಣು ಕ್ಲಿನಿಕ್, ಜಯದೇವ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಿಗೆ ತೆರಳಿದ್ದಾನೆ.

ಕೊರೊನಾ ಸೋಂಕಿತರ ವಿವರ:
1. ರೋಗಿ 428 : 32 ವರ್ಷದ ಪುರುಷನಾಗಿದ್ದು, ವಿಜಯಪುರದ ನಿವಾಸಿ. ರೋಗಿ ನಂಬರ್ 221ರ ಜೊತೆ ಸಂಪರ್ಕದಲ್ಲಿದ್ದರು. ಸದ್ಯ ವಿಜಯಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
2. ರೋಗಿ 429: 25 ವರ್ಷದ ಮಹಿಳೆಯಾಗಿದ್ದು, ವಿಜಯಪುರದ ನಿವಾಸಿ. ಸಂಪರ್ಕ ಇನ್ನು ಪತ್ತೆಯಾಗಿಲ್ಲ. ಸದ್ಯ ವಿಜಯಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
3. ರೋಗಿ 430: 30 ವರ್ಷದ ಮಹಿಳೆಯಾಗಿದ್ದು, ಹುಬ್ಬಳ್ಳಿಯ ನಿವಾಸಿ. ರೋಗಿ ನಂಬರ್ 236ರ ಸಂಪರ್ಕದಲ್ಲಿದ್ದರು. ಸದ್ಯ ಹುಬ್ಬಳ್ಳಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
4. ರೋಗಿ 431: 13 ವರ್ಷದ ಬಾಲಕಿತಾಗಿದ್ದು, ಹುಬ್ಬಳ್ಳಿ ನಿವಾಸಿ. ರೋಗಿ ನಂಬರ್ 236ರ ಸಂಪರ್ಕದಲ್ಲಿದ್ದರು. ಸದ್ಯ ಹುಬ್ಬಳ್ಳಿ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
5. ರೋಗಿ 432: 78 ವರ್ಷದ ವೃದ್ಧೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿ. ರೋಗಿ ನಂಬರ್ 390ರ ಸಂಪರ್ಕದಲ್ಲಿದ್ದರು. ಸದ್ಯ ಮಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Corona A

6. ರೋಗಿ 433: 30 ವರ್ಷದ ಪುರುಷನಾಗಿದ್ದು, ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
7. ರೋಗಿ 434: 60 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
8. ರೋಗಿ 435: 22 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
9. ರೋಗಿ 436 : 40 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
10. ರೋಗಿ 437: 30 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Corona Ward 1

11. ರೋಗಿ 438: 25 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
12. ರೋಗಿ 439: 37 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
13. ರೋಗಿ 440: 43 ವರ್ಷದ ಪುರುಷನಾಗಿದ್ದು ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
14. ರೋಗಿ 441: 41 ವರ್ಷದ ಪುರುಷನಾಗಿದ್ದು, ಬೆಂಗಳೂರಿನ ನಿವಾಸಿ. ರೋಗಿ ನಂಬರ್ 419 ಸಂಪರ್ಕದಲ್ಲಿದ್ದರು. ಸದ್ಯ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
15. ರೋಗಿ 442: 47 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ರೋಗಿ ನಂಬರ್ 171 ಮತ್ತು 371ರ ಸಂಪರ್ಕದಲ್ಲಿದ್ದರು. ಸದ್ಯ ಮಂಡ್ಯದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
16. ರೋಗಿ 443: 28 ವರ್ಷದ ಮಹಿಳೆಯಾಗಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ. ರೋಗಿ ನಂಬರ್ 179ರ ಸಂಪರ್ಕದಲ್ಲಿದ್ದರು. ಸದ್ಯ ಮಂಡ್ಯದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ 9, ವಿಜಯಪುರ, ಹುಬ್ಬಳ್ಳಿ ಮತ್ತು ಮಂಡ್ಯದಲ್ಲಿ ತಲಾ ಎರಡು ಪ್ರಕರಣಗಳ ಹಾಗೂ ದಕ್ಷಿಣ ಕನ್ನಡದ ಬಂಟ್ವಾಳ ವೃದ್ಧೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ವಿಜಯಪುರದ ರೋಗಿ ನಂಬರ್ 429, 25 ವರ್ಷದ ಮಹಿಳೆಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *