– ಮಗುವನ್ನ ಉಳಿಸಲು ಸಹಾಯ ಬೇಡುತ್ತಿರುವ ಪೋಷಕರು
ರಾಯಚೂರು: ಇಲ್ಲಿನ ವಿರೇಶ್- ಶ್ವೇತಾ ದಂಪತಿಯ ಒಂದು ವರ್ಷದ ಮಗು ಸಾತ್ವಿಕ್ ನಂದನ್ ಸ್ಪೈನಲ್ ಮಸ್ಕೂಲರ್ ಆಟ್ರೋಪಿ ಟೈಪ್-1 ಕಾಯಿಲೆಯಿಂದ ಬಳಲುತ್ತಿದ್ದು, ಸಹಾಯಕ್ಕಾಗಿ ಪೋಷಕರು ಅಂಗಲಾಚುತ್ತಿದ್ದಾರೆ.
Advertisement
ಮಗು ಒಂದು ತಿಂಗಳು ಇದ್ದಾಗಲೇ ಸ್ಪೈನಲ್ ಮಸ್ಕೂಲರ್ ಆಟ್ರೋಪಿ ಟೈಪ್-1 ಮಾರಣಾಂತಿಕ ಕಾಯಿಲೆ ಕಾಣಿಸಿಕೊಂಡಿದೆ. ಮೊದಲು ನ್ಯುಮೋನಿಯಾ ಅಂದುಕೊಂಡಿದ್ದ ಇವರು ಹತ್ತಾರು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಇದೀಗ ಈ ಕಾಯಿಲೆಯಿಂದ ಗುಣಪಡಿಸಲು ವೈದ್ಯರು ಔಷಧ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡನ ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು
Advertisement
Advertisement
16 ಕೋಟಿ ರೂ. ಮೌಲ್ಯದ ಜೋಲ್ಗಸ್ಮಾ ಎಂಬ ಇಂಜೆಕ್ಷನ್ ಕೊಡಿಸಬೇಕು. ಇದೊಂದೆ ಮಗುವಿನ ಕಾಯಿಲೆಗೆ ಚಿಕಿತ್ಸೆ. ಇಲ್ಲದಿದ್ದರೆ ಮಗು ಬದುಕುಳಿಯುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಚುಚ್ಚುಮದ್ದು ಭಾರತದಲ್ಲಿ ಸಿಗೋದಿಲ್ಲ, ಅಮೆರಿಕದಿಂದ ತರಿಸಬೇಕು. ಆದರೆ ತಿಂಗಳಿಗೆ 8 ಸಾವಿರ ವೇತನ ಪಡೆಯುವ ತಂದೆ ವಿರೇಶ್ ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಿ, ಸಾಲ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈಗಾಗಲೇ ಸುಮಾರು 5 ಲಕ್ಷ ರೂ. ಖರ್ಚಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
Advertisement
ಇದೇ ಜುಲೈ 26ಕ್ಕೆ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ ಬರುತ್ತಿದ್ದು, ಮಗುವನ್ನು ಉಳಿಸಿಕೊಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಚುಚ್ಚುಮದ್ದಿನ ಬೆಲೆ 16 ಕೋಟಿ ರೂ. ಇದ್ದು, ಹೆಚ್ಚುವರಿ ತೆರಿಗೆ ಸೇರಿ 18 ಕೋಟಿ ರೂ. ಆಗಲಿದೆ. ಸಹೃದಯರಾದ ಕನ್ನಡಿಗರು ಹಾಗೂ ಸರ್ಕಾರ ಕೂಡಲೇ ನಮ್ಮ ನೆರವಿಗೆ ಬಂದು ಈ ಔಷಧ ಕೊಡಿಸಿ ಎಂದು ಪೋಷಕರು ಬೇಡಿಕೊಳ್ಳುತ್ತಿದ್ದಾರೆ ಎಂದು ಕೋರಿದ್ದಾರೆ.
Name – Veeresh
A/c- 18132200114731
IFSC – CNRB0011813
Canara Bank. Deosugur 584170. Dist Raichur. Tq Raichur
PH no – 9036695059