ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಸಮಯದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಗಡಿ ಭದ್ರತಾ ಪಡೆಯ (BSF) 16 ಸಿಬ್ಬಂದಿಗೆ ಕೇಂದ್ರ ಸರ್ಕಾರ ಶೌರ್ಯ ಪದಕ (Gallantry Medals) ಘೋಷಿಸಿದೆ.
The Awardees:
– Asstt. Sub Inspector Udai Vir Singh
– Shri Alok Negi, Asstt. Commandant
– ASI Rajappa B T
– Constable Manohar Xalxo pic.twitter.com/p0Lzx2jqzV
— BSF (@BSF_India) August 14, 2025
ಆಪರೇಷನ್ ಸಿಂಧೂರದ ವೇಳೆ ಅಚಲ ಪರಾಕ್ರಮ, ಅಪ್ರತಿಮ ಸಾಹಸ ತೋರಿದ್ದಕ್ಕಾಗಿ 16 ಬಿಎಸ್‌ಎಫ್ ಯೋಧರಿಗೆ ಸ್ವಾತಂತ್ರ್ಯೋತ್ಸವದಂದು (Independence Day) ಶೌರ್ಯ ಪದಕ ನೀಡಲಾಗುವುದು. ಈ ಪದಕಗಳು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಬಿಎಸ್‌ಎಫ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದನ್ನೂ ಓದಿ: ದಾವಣಗೆರೆ | ಅಪ್ರಾಪ್ತನಿಂದ ಬೈಕ್ ರೈಡ್ – ಮಾಲೀಕನಿಗೆ 25,000 ದಂಡ
The Awardees:
– Sub Inspector Vyas Dev
– Constable Suddi Rabha
– Shri Abhishek Srivastav, Asstt. Commandant
– Constable Bhupendra Bajpai pic.twitter.com/gsH3HpO52I
— BSF (@BSF_India) August 14, 2025
ಪದಕ ವಿಜೇತರಲ್ಲಿ ಡೆಪ್ಯೂಟಿ ಕಮಾಂಡರ್, ಇಬ್ಬರು ಸಹಾಯಕ ಕಮಾಂಡರ್ ಮತ್ತು ಒಬ್ಬ ಇನ್ಸ್ಪೆಕ್ಟರ್ ಸೇರಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆಯ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ಪಡೆಗಳ 1,090 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಸರ್ಕಾರ ಪ್ರಕಟಿಸಿದೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ
ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 233 ಸಿಬ್ಬಂದಿಗೆ ಶೌರ್ಯ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು 758 ಜನರಿಗೆ ಪ್ರತಿಭಾನ್ವಿತ ಸೇವಾ ಪದಕ ಘೋಷಿಸಲಾಗಿದೆ. ಇದರಲ್ಲಿ ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವಾ ಸಿಬ್ಬಂದಿಗೆ ಪದಕಗಳು ಸೇರಿವೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!