ಬೆಂಗಳೂರು: ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ಎಂ.ಎಸ್.ಸತ್ಯು (M.S.Sathyu) ಅವರನ್ನು 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (15th Bengaluru International Film Festival) ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ಹಾಗೂ ಕಲಾ ನಿರ್ದೇಶಕರಾದ ಮೈಸೂರು ಶ್ರೀನಿವಾಸ ಸತ್ಯು (ಎಂ.ಎಸ್.ಸತ್ಯು) ಅವರು ಕಲಾಜಗತ್ತಿಗೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ “15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ದ “ಜೀವಮಾನ ಸಾಧನೆ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬುಧವಾರ ರಾಜ್ಯದ 28 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿಎಸ್‌ವೈ
Advertisement
ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ, ಹಿರಿಯ ರಂಗಕರ್ಮಿ ಹಾಗೂ ಕಲಾ ನಿರ್ದೇಶಕರಾದ ಮೈಸೂರು ಶ್ರೀನಿವಾಸ ಸತ್ಯು (ಎಂ.ಎಸ್.ಸತ್ಯು) ಅವರು ಕಲಾಜಗತ್ತಿಗೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ “15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ದ “ಜೀವಮಾನ ಸಾಧನೆ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ.
ಅವರ ನಿರ್ದೇಶನದ ಹಿಂದಿ… pic.twitter.com/kEwAgFR4xb
— CM of Karnataka (@CMofKarnataka) March 5, 2024
Advertisement
ಸತ್ಯು ಅವರ ನಿರ್ದೇಶನದ ಹಿಂದಿ ಚಿತ್ರ ‘ಗರಂ’ ಹಲವಾರು ರಾಷ್ಟ್ರೀಯ – ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದರೆ, ಕನ್ನಡದ ‘ಬರ’ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿತ್ತು. ಕಲಾ ನಿರ್ದೇಶಕರಾಗಿ ಅವರು ನಿರ್ದೇಶಿಸಿದ ಮೊದಲ ಚಲನಚಿತ್ರವಾದ ಹಕೀಕತ್ ‘ಫಿಲ್ಮ್ ಫೇರ್ ಪ್ರಶಸ್ತಿ’ಯನ್ನು ಪಡೆದಿತ್ತು. ದಾರಾಶೀಕೋ ನಾಟಕವು ಆಧುನಿಕ ಉತ್ಕೃಷ್ಟ ನಾಟಕವೆಂದು ಗುರುತಿಸಲ್ಪಟ್ಟಿದ್ದು ಅವರ ಇನ್ನೊಂದು ಸಾಧನೆಯಾಗಿದೆ ಎಂದು ಸಿಎಂ ಸ್ಮರಿಸಿದ್ದಾರೆ.
Advertisement
Advertisement
ಹೀಗೆ ನಮ್ಮೂರಿನಲ್ಲಿ ಹುಟ್ಟಿದ ಮೇರು ಸಾಧಕ, ಹಿರಿಯ ರಂಗಕರ್ಮಿಯೊಬ್ಬರು ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತನ ಕೇಸನ್ನೇ ಮುಚ್ಚಿ ಹಾಕಿದ್ದರು: ಸಿಎಂ